ಸೇಡಂ: ತಾಲೂಕಿನ ನಾಡೇಪಲ್ಲಿ, ಸಿಲಾರಕೋಟ್, ಮೇದಕ್ ಮಾರ್ಗವಾಗಿ ಬಸ್ ಹೊಸ ವ್ಯವಸ್ಥೆ ಮಾಡಿಕೊಡಬೇಕೆಂದು ಡಿಸೆಂಬರ್ ೨೯ರಂದು ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ಕುರಿತು ನಮ್ಮ ಭಾರತ ವೈಭವ ನ್ಯೂಸ್ ವರದಿ ಮಾಡಲಾಗಿತ್ತು ಸದರಿ ವರದಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ದಿನಾಂಕ/೦೯/೦೧/೨೦೨೬ರಂದು ಸೇಡಂ ಗುರುಮಠಕಲ್ ವಾಯ ಸಿಲಾರಕೋಟ್, ಮೆದಕ್ ಮಾರ್ಗವಾಗಿ ಹೊಸ ಬಸ್ ವ್ಯವಸ್ಥೆ ಮಾಡಲಾಗಿದೆ.

ಹೊಸ ಬಸ್ ವ್ಯವಸ್ಥೆ ಮಾಡಿದ ಸಂಧರ್ಭದಲ್ಲಿ ಸಿಲಾರಕೋಟ್ ಬಸ್ ನಿಲ್ದಾಣದ ಹತ್ತಿರ ಬಸ್ ಗೆ ಪೂಜೆ ಸಲ್ಲಿಸಿ ಚಾಲಕರಿಗೆ ಮತ್ತು ಕಂಡಕ್ಟರ್ ಅವರಿಗೆ ಸನ್ಮಾನ ಮಾಡಿ ಸಂಚಾರ ಮುಂದುವರಿಸಿಕೊಡಲಾಯಿತು.
ಈ ಸಂಧರ್ಭದಲ್ಲಿ ಭಾರತ ವೈಭವ ಪತ್ರಕರ್ತರಾದ ವೆಂಕಟಪ್ಪ ಕೆ ಸುಗ್ಗಾಲ್ ಅವರು ಮಾತನಾಡಿ ಅಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿ ಅಭಿನಂದನಿಸಿದರು.
ಈ ಸಂಧರ್ಭದಲ್ಲಿ ಶಶಿಧರ್ ಸಾಹುಕಾರ್, ರಮೇಶ್ ಮುಧಿರಾಜ್, ವೆಂಕಟೇಶ್ ಕಲಾಲ್, ಮಲ್ಲೇಶ್ ಬೇಶೆ, ನವೀನ್ ಕುಮಾರ್ ಕುರುಕು, ಸೇರಿದಂತೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್.




