ಬೆಳಗಾವಿ:- ಬೆಳಗಾವಿಗೆ ಆಗಮಿಸಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಅವರಿಗೆ ಬೆಳಗಾವಿ -ಧಾರವಾಡ ಹೊಸ ರೈಲ್ವೆ ಲೈನ್ ಗೆ ಬೈಲಹೊಂಗಲ ಸಂಪರ್ಕ ಕಲ್ಪಿಸಲು ಮನವಿ ನೀಡಲಾಯಿತು.
ಬೈಲಹೊಂಗಲ ತಾಲೂಕು ಸ್ವಾತಂತ್ರ್ಯ ಸೇನಾನಿಗಳ ತವರೂರಾಗಿದ್ದು, ಐತಿಹಾಸಿಕ,ಸಂಗತಿಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಾ ಬಂದಿರುತ್ತದೆ. ಬೈಲಹೊಂಗಲ ನಗರದಲ್ಲಿ ಚನ್ನಮ್ಮಾಜಿಯವರ ಸ್ಮಾರಕ
(ಐಕ್ಯಸ್ಥಳ), ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಊರಿನಲ್ಲಿ ಸೈನಿಕ ಶಾಲೆ ಹಾಗೂ ಸಂಗೋಳ್ಳಿ ರಾಯಣ್ಣ ಉದ್ಯಾನವನ
(ರಾಕ್ ಗಾರ್ಡನ) ಇರುವುದರಿಂದ ಅನೇಕ ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಾ ಇರುತ್ತಾರೆ.
ಮತ್ತು 120 ಕ್ಕೂ ಹೆಚ್ಚಿನ ಗ್ರಾಮಗಳ ಜನತೆಗೆ ಹಾಗೂ ಶಕ್ತಿಪೀಠವಾದ ಸೋಗಲ ಸೋಮೇಶ್ವರ ದೇವಸ್ಥಾನ,ಸವದತ್ತಿ ಯಲ್ಲಮ್ಮ ದೇವರ ದರ್ಶನಕ್ಕೆ ವಿವಿಧ ರಾಜ್ಯಗಳ ಜನತೆ ದರ್ಶನಕ್ಕೆ,ಆಗಮಿಸುತ್ತಿರುತ್ತಾರೆ. ಮತ್ತು ಸಕ್ಕರೆ ಕಾರ್ಖಾನೆಗಳು, ಹಾಗೂ ಹತ್ತಿ ಉದ್ಯಮಕ್ಕೆ ಹಾಗೂ ರೈತರ ಧವಸ ಧಾನ್ಯಗಳ
ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ರೇಲ್ವೆಯಿಂದ ವಂಚಿತ ಹಾಗೂ
ನೀರಾವರಿಯಿಂದ ವಂಚಿತ ಪ್ರದೇಶವಾಗಿದ್ದು,
ರೇಲ್ವೆ ಸಂಪರ್ಕದಿಂದ ಈ ಭಾಗದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನ್ಯಾಯ ಒದಗಿಸಿದ್ದಂತಾಗುತ್ತದೆ. ಹಾಗೂ ಬೈಲಹೊಂಗಲ ಭಾಗದ ಜನರ ಬಹುದಿನದ ಕನಸು ಈಡೇರಿದಂತಾಗುತ್ತದೆ.ಆದ ಕಾರಣದಿಂದ ಬೆಳಗಾವಿ-ಧಾರವಾಡ ಹೊಸ ಮಾರ್ಗವಾಗುತ್ತಿದ್ದು ಈ ಮಾರ್ಗದಲ್ಲಿ ಹಿರೇಬಾಗೇವಾಡಿಯಿಂದ
ಬೈಲಹೊಂಗಲ-ಬೆಳವಡಿ-ಸವದತ್ತಿ ಮಾರ್ಗವನ್ನು ಜೋಡಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ,ಭಾ.ಜ.ಪಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಅಮ್ಮಿನಭಾವಿ, ಭಾ.ಜ.ಪಾ ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ ಉಪಸ್ಥಿತರಿದ್ದರು.
ವರದಿ:- ಪ್ರತೀಕ ಚಿಟಗಿ