ಬಾದಾಮಿ:– ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಇಂದು ಭಾರತೀಯ ಜನತಾ ಪಕ್ಷದ ಕಚೇರಿಯಿಂದ ಇಮ್ಮಡಿ ಪುಲಿಕೇಶಿ ವೃತ್ತದಿಂದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನೆ ಸಾಗುತ್ತಾ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ನಿದ್ದೆ ರಾಮಯ್ಯ ಎದ್ದೇಳೋದು ಯಾವಾಗ ಎನ್ನುತ್ತಾ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಬೆಲೆ ಏರಿಕೆ ವಿರುದ್ಧ ಜಿಲ್ಲಾಧ್ಯಕ್ಷರಾದ ಶಾಂತಗೌಡ ಟಿ ಪಾಟೀಲರ ಸಾರತ್ಯದಲ್ಲಿ ಪ್ರತಿಭಟನೆ ಸಾಗಿತು.
ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಜಿಲ್ಲಾಧ್ಯಕ್ಷ ಶಾಂತಗೌಡ ಟಿ ಪಾಟೀಲ ಹಾಗೂ ಬಿ ಜೆ ಪಿ ಪಕ್ಷದ ತಾಲೂಕಾಧ್ಯಕ್ಷ ನಾಗರಾಜ್ ಕಾಚಟ್ಟಿ, ಹಿರಿಯ ಮುಖಂಡರಾದ ಬಿ. ಪಿ. ಹಳ್ಳೂರ ಮಾತನಾಡಿ ಬೆಲೆ ಏರಿಕೆ ಮಾಡುತ್ತಾ ಜನಸಾಮಾನ್ಯರ ರಕ್ತ ಹೀರುತ್ತಿದೆ ಕಾಂಗ್ರೆಸ್ ಸರಕಾರ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಮಾತನಾಡಿದರು. ನಂತರ ಪಿ. ಎಲ್. ಡಿ. ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ಸಾಗುತ್ತಾ ತಹಶೀಲ್ದಾರ್ ಕಾರ್ಯಲಯದ ಶಿರಸ್ತೇದಾರ ವಿ.ಎಚ್.ಜಾಧವ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬಿ. ಪಿ. ಹಳ್ಳೂರ, ವಿ. ಎನ್. ಸಾತಣ್ಣವರ, ಹಾಗೂ ಯುವಮುಖಂಡರಾದ ಕಿರಣಕುಮಾರ್ ಕುಲಕರ್ಣಿ,,ಇಷ್ಟಲಿಂಗ ನರೇಗಲ್, ರಾಘವೇಂದ್ರ ದಯಾಪುಲೆ, ಕಾಂತಿಚಂದ್ರ ಜ್ಯೋತಿ, ಹೊನ್ನಯ್ಯ ಹಿರೇಮಠ ಇನ್ನೂ ಅನೇಕ ಮುಖಂಡರುಗಳು ಮಹಿಳಾ ಮುಖಂಡರುಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹಾಗಿಯಾಗಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ