ಕ್ಯಾರೇ ಅನ್ನದ ಗ್ರಾಮ ಪಂಚಾಯತ ಅಧಿಕಾರಿ
ಜನಪ್ರತಿನಿಧಿಗಳು ಇದ್ದು ಎಲ್ಲದಂತೆ ಎಂದು ಅಳಲು ತೋಡಿಕೊಂಡ ಗ್ರಾಮಸ್ಥರು
ಭಾಲ್ಕಿ: ತಾಲೂಕು ಕೇಂದ್ರದಿಂದ ಬರಿ 6 ಕಿ.ಮೀ ದೂರವಿರುವ ಭಾತಂಬ್ರಾ ಗ್ರಾಮವು ಅಭಿವೃದ್ಧಿಯಿಂದ ದೂರ ಸರೆದು ಸಮಸ್ಯೆಗಳ ಗೂಡಾಗಿ ಪರಿವರ್ತನೆಯಾಗಿದೆ.
ಈ ಗ್ರಾಮವು ಸುಮಾರು 8000 ಜನಸಂಖ್ಯೆ ಹೊಂದಿದ್ದು 5 ವಾರ್ಡಗಳನ್ನು ಒಳಗೊಂಡಿರುತ್ತವೆ. ಭಾತಂಬ್ರಾ ತಾಂಡಾ ಹಾಗೂ ಆನಂದವಾಡಿ ಗ್ರಾಮಗಳು ಈ ಪಂಚಾಯತಗೆ ಸೇರಲ್ಪಟ್ಟಿರುತ್ತವೆ.
21 ಜನ ಸದಸ್ಯರು ಭಾತಂಬ್ರಾ ಗ್ರಾಮದವರಾಗಿದ್ದು, 2 ಜನ ಸದಸ್ಯರು ಮಾತ್ರ ಪಕ್ಕದ ಆನಂದವಾಡಿ ಗ್ರಾಮದವರಾಗಿರುತ್ತಾರೆ.
ಪಿಡಿಓ ಅವರು ಗ್ರಾಮದ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲಾ ಎನ್ನುವುದು ಗ್ರಾಮಸ್ಥರ ನೇರ ಆರೋಪ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳುಗಳೆ ಕಳೆದರು ಕೂಡಾ ದುರಸ್ತಿ ಭಾಗ್ಯ ಕಂಡಿಲ್ಲಾ ಇದನ್ನ ಕಂಡ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕೊಳಚೆ ನೀರು ಸಂಗ್ರಹಣೆಯಾಗಿ ಗಬ್ಬುನಾರುತ್ತಿದೆ. ಕೀಟಗಳು, ಸೊಳ್ಳೆಗಳು ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಆನಾರೋಗ್ಯದ ಪರಿಣಾಮ ಬೀರುತ್ತಿದೆ ಇದಕ್ಕೆ ಹೊಣೆಯಾರು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕತ್ತಲಾಯಿತು ಎಂದರೆ ಸಾಕು ಶುದ್ಧ ಕುಡಿಯುವ ನೀರಿನ ಘಟಕ ಪಕ್ಕದ ಅಂಗನವಾಡಿ ಕೇಂದ್ರವು ಮಲಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದೆ.
ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ ಅನ್ನುತ್ತಿದ್ದಾರೆ ಗ್ರಾಮದ ಮಹಿಳೆಯರು.
ವಾರ್ಡಗಳಲ್ಲಿನ ರಸ್ತೆಯ ಬದಿಗೆ ನಾಳಿಗಳ ಸ್ಥಿತಿ ನೋಡಿದರೆ ಹೊಲಸು, ಕೊಳಚೆ ನೀರಿನಿಂದ ತುಂಬಿದು ಸಂಚಾರಕ್ಕೆ ಹೆಳಬಾರದ ತೊಂದರೆಯಾಗುತ್ತಿದೆ ಮಕ್ಕಳು, ವಯಸ್ಕರರು, ಹಿರಿಯ ನಾಗರಿಕರು ಆ ಸ್ಥಳದಲ್ಲಿ ಸಂಚರಿಸುವಾಗ ಕೊಳಚೆ ನೀರಿನಲ್ಲಿ ಜಾರಿ ಬಿದ್ದಿರುವ ಉದಾಹರಣೆಗಳಿವೆ.
ವರದಿ : ಸಂತೋಷ ಬಿಜಿ ಪಾಟೀಲ




