ಚಿಟಗುಪ್ಪ : ತಾಳಮಡಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭವಾನಿ ತಾಯಿ ಮೂರ್ತಿ ಮೆರವಣಿಗೆ ಅತೀ ವೈಭವದಿಂದ ಜರುಗಿತ್ತು.
ದಸರಾ ಹಬ್ಬದ ಪ್ರಯುಕ್ತ ಸುಮಾರು 9 ದಿನಗಳ ಕಾಲ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭವಾನಿ ಆರಾಧ್ಯೆಯಾಗಿರುವ ಅನಿತಾ ತಾಯಿ ಪೂಜೆ ನೆರವೇರಿಸಿದರು.ಪ್ರತಿ ರಾತ್ರಿ ಭಜನೆ ಕೀರ್ತನೆಗಳು ಜರಗಿದ್ದವು.
ಪ್ರತಿಷ್ಠಾಪನೆ ಕೊನೆಯ ದಿನದಂದು ಗ್ರಾಮದ ಬಸವೇಶ್ವರ ವೃತದಿಂದ ಗ್ರಾಮದ ಮುಖ್ಯ ದ್ವಾರದವರೆಗೆ ಅತಿ ಸಡಗರ ಸಂಭ್ರಮದಿಂದ ಡೊಳ್ಳು,ಬ್ಯಾಂಡ್ ಹಾಗೂ ಹಲಗೆಗೆ ಯುವಕರು ಮಕ್ಕಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಬಳಿಕ ಪ್ರತಿಷ್ಠಾಪನೆ ಮಾಡಿರುವ ಭವಾನಿ ಮೂರ್ತಿಯನ್ನ ಗ್ರಾಮದ ಹೊರವಲಯಲ್ಲಿರುವ ಭವಾನಿ ಮಂದಿರದಲ್ಲಿ ಇರಿಸಲಾಯಿತು.
ಸಂದರ್ಭದಲ್ಲಿ ಭವಾನಿ ಉತ್ಸವ ಸಮಿತಿಯ ಪ್ರಮುಖರಾದ ಪಪ್ಪು ಪಾಟೀಲ್,ನಾಗಪ್ಪ ಕುರಿಕೋಟಿ,ರಾಜಕುಮಾರ್ ವಾಡೆಕರ್,ನಾಗಪ್ಪ ವಿಶ್ವಕರ್ಮ ಪ್ರಭು ಪಂಚಾಳ,ಕಾರ್ತಿಕ್ ಬಂಡೆಪನೋರ್,ರಾಜು ಸಾಳೆ,ಶಿವು ಬಾಜೋಳಗಿ,ಸಚಿನ್ ತೆಗೆಮ್ಮಪುರ್ ಸೇರಿ ಅನೇಕ ಯುವಕರು,ಗ್ರಾಮದ ಗಣ್ಯರು, ಮಹಿಳಾ ತಾಯಿಂದಿಯರು ಇದ್ದರು.
ವರದಿ : ಸಜೀಶ ಲಂಬುನೋರ್




