ಇಳಕಲ್:ಸತ್ಯ ಶೋಧಕ ಸಂಘ,ಕರ್ನಾಟಕ ಇಳಕಲ್-ಹುನಗುಂದ ಘಟಕ ಹಾಗೂ ಜಾತ್ಯಾತೀತ ಬಹುತ್ವ ಕರ್ನಾಟಕ ಸಂಕಲ್ಪದ ಸರ್ವಜಾತಿ-ಸರ್ವಧರ್ಮ ಸಹೋದರತ್ವದ ಐಕ್ಯತಾ ಸಮಾವೇಶವು ನಂ 9 ರಂದು ಕೂಡಲಸಂಗಮದಲ್ಲಿ ಬಸವ-ಭೀಮ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸತ್ಯಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ್ ಎಸ್.ಆರ್.ಕೆ.ನಿಲಯದಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಸತ್ಯಶೋಧಕ ಸಂಘ ಕರ್ನಾಟಕ ಇಳಕಲ್ -ಹುನಗುಂದ ಅಡಿಯಲ್ಲಿ ಇದೇ ನವಂಬರ್ 9ರಂದು ಬಸವಣ್ಣನವರ ಐಕ್ಯತಾ ಸ್ಥಳವಾದ ಕೊಡಲಸಂಗಮದಲ್ಲಿ ಮುಂಜಾನೆ 9.00ಗಂಟೆಗೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಇರಲಿದೆ.
ಹಾಗೆ 11:00ಗೆ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕಲ್ಲಿ ವಿಶೇಷ ವಾಗಿ ಜಾತ್ಯಾತೀತ ಬಹುತ್ವ ಕರ್ನಾಟಕ ಸಂಕಲ್ಪದ ಸರ್ವಜಾತಿ – ಸರ್ವಧರ್ಮ ಸೋದರತ್ವದ ಐಕ್ಯತಾ
ಬಸವ-ಭೀಮ ಸಮಾವೇಶ ನಡೆಯಲಿದೆ.
ಕಾರ್ಯಕ್ರಮ ಉದ್ಘಾಟನೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ವಹಿಸಲಿಧದಾರೆ,ಇಲಕಲ್ ಗುರುಮಹಾಂತ ಪೂಜ್ಯರು,ತಂಗಡಿಬಪೂಜ್ಯರು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ವಹಿಸಲಿದ್ದಾರೆ
ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಮತ್ತಿತರರ ಮುಖಂಡರು ಆಗಮಿಸಲಿದ್ದು ಆದಕಾರಣ ಸರ್ವಜಾತಿಯ ಜನಾಂಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪರಶುರಾಮ್ ಮಹಾರಾಜನವರ ವಿನಂತಿಸಿಕೊಂಡರು.




