ಭೀಮಾ ಕೋರೆಗಾವ್ ವಿಜಯೋತ್ಸವ, ರಾಜಬೀದಿಯಲ್ಲಿ ಭವ್ಯ ಮೆರವಣಿಗೆ

Bharath Vaibhav
ಭೀಮಾ ಕೋರೆಗಾವ್ ವಿಜಯೋತ್ಸವ, ರಾಜಬೀದಿಯಲ್ಲಿ ಭವ್ಯ ಮೆರವಣಿಗೆ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಿಂದ ಟಿಪ್ಪು ವೃತ್ತದವರೆಗೂ ವಿವಿಧ ದಲಿತಪರ ಸಂಘಟನೆಗಳಿಂದ ಪ್ರಮುಖ ಬೀದಿಯಲ್ಲಿ ಭೀಮಾ ಕೋರೆಗಾವ್ ವಿಜಯೋತ್ಸವದ ಭವ್ಯ ಮೆರವಣಿಗೆ ಜರುಗಿತು.

ಕಾಂಗ್ರೇಸ್ ಹಿರಿಯ ಮುಖಂಡ ಬಿ.ಎಮ್.ಸತೀಶ್ ಅವರು ಹಲವು ಮುಖಂಡರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಪುತ್ಥಳಿ ಹಾಗೂ ವಿಜಯೋತ್ಸವ ಸ್ತೂಪಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ಡಾ.ಕೊಡ್ಲೆ ಮಲ್ಲಿಕಾರ್ಜುನ ಅವರು ಮಾತನಾಡಿ ಶೋಷಿತ ಸಮಾಜದ ಈ ಅದ್ದೂರಿ ಮೆರವಣಿಗೆ ನಡೆಯಲು ಅಂಬೇಡ್ಕರರು ಸಂವಿಧಾನ ಮೂಲಕ ನೀಡಿದ ಕೊಡುಗೆಯಾಗಿದೆ. ನಾವೆಲ್ಲರೂ ಅವರ ವೀರತನವನ್ನು ಸ್ಮರಿಸಬೇಕಿದೆಂದು ತಿಳಿಸಿದರು.

ಡಾ.ಬಾಬು ಜಗಜೀವನ್ ರಾಮ್ ಜನ ಜಾಗೃತಿ ವೇದಿಕೆ ತಾಲೂಕು ಗೌರವಾಧ್ಯಕ್ಷ ಚಿಕ್ಕಬಳ್ಳಾರಿ ನಾಗಪ್ಪ ಅವರು ಮಾತನಾಡಿ ಈ ಶೌರ್ಯ ದಿನವು ನಮ್ಮ ದಲಿತರಿಗೆ ಪ್ರಮುಖ ಹಬ್ಬವಾಗಿದೆ.

ಎಲ್ಲಾ ವೀರರಿಗೆ ವಂದನೆ ಸಲ್ಲಿಸಲೆಂದು ವಿಜೃಂಭಣೆಯಿಂದ ರಾತ್ರಿಯಾದರೂ ಎಲ್ಲಾ ಯುವಕರು, ಹಿರಿಯ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಿದ್ದು ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಲಾಗುವುದೆಂದರು.

ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಮುನಿಸ್ವಾಮಿ ಅವರು ಮಾತನಾಡಿ ನಮ್ಮ ದೇಶದ ಇತಿಹಾಸವನ್ನು ತೆಗೆದು ನೋಡಿದಾಗ ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದಿರುವುದನ್ನು ಕಾಣಬಹುದಾಗಿದೆ.
ಆದರೆ ಸ್ವಾಭಿಮಾನಕ್ಕಾಗಿ, ಶೋಷಣೆಯ ವಿರುದ್ದವಾಗಿ ನಡೆದ ಯುದ್ದವಾಗಿದೆ.

ಆದರೆ ಸಾವಿರಾರು ಸೈನಿಕರ ವಿರುದ್ದ ನೂರಾರು ಜನರು ದಂಗೆಯೆದ್ದು ಜಯಗಳಿಸಿದ ಈ ಕೋರೆಗಾವ್ ವಿಜಯ ದಲಿತರ ಸ್ವಾಭಿಮಾನದ ವಿಜಯದ ಸಂಕೇತವಾಗಿದೆಂದರು.
ಇದೇ ವೇಳೆ ಮುಖಂಡರಾದ ರಾಮಪ್ಪ, ಬ್ರಹ್ಮ, ಹುಲುಗಪ್ಪ, ಮಾರೇಶ, ಇನ್ನಿತರರಿದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!