ಚಾಮರಾಜನಗರ: ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಮಾತನಾಡಿ ಪ್ರತ್ಯೇಕ ಸಂವಿಧಾನವನ್ನು ಫೆ. 3 ರಂದು ಕೇಂದ್ರ ಸರ್ಕಾರಕ್ಕೆ ನೀಡುವ ಮನುಸ್ಮೃತಿ ಆಧಾರಿತ ಸನಾತನಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಸಂವಿಧಾನಕ್ಕೆ ಧಕ್ಕೆಯಾದರೆ ದೇಶಾದ್ಯಂತ ಭೀಮಕೊರೆಂಗಾವ್ ಯುದ್ದ ನಡೆಯುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ದೊರೆಸ್ವಾಮಿ ಹನೂರು, ನಂಜುಂಡಸ್ವಾಮಿ ಗುಂಡ್ಲುಪೇಟೆ, ಶಿವಕುಮಾರ್, ತಾಲೂಕು ಸಂಚಾಲಕ ರಾದ ರಂಗಸ್ವಾಮಿ ಗುಂಡ್ಲುಪೇಟೆ, ಸಿದ್ದರಾಜು ಕೊಳ್ಳೇಗಾಲ, ಚಂದ್ರಶೇಖರ ಯಳಂದೂರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ




