ಕಾಳಗಿ : ಪಟ್ಟಣದ ಹೊರವಲಯದ ಕರಿ ಕಟ್ಟಿ ಏರಿಯಾದಲ್ಲಿ ಹಣದಿಗಾಗಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಕ್ರಮ ಕೈಗೊಂಡಿಲ್ಲ.ಈ ವರ್ಷ ಉತ್ತಮ ಮಳೆಯಾಗಿದೆ,ಉಳುಮೆ ಮಾಡಲು ಹೊಲಗಳಿಗೆ ಹೋಗಬೇಕಾದರೆ ಒಂದು ಕಡೆ ಗದ್ದೆ ಇನ್ನೊಂದು ಕಡೆ ಹಳ್ಳವಿದೆ ಮಧ್ಯದಲ್ಲಿ ಹಣದಿ ಇದ್ದು.
ಇದನ್ನು ಸರಿಪಡಿಸಿ ಕೊಟ್ಟರೆ ಸುಮಾರು 500 ರಿಂದ 600 ಎಕರೆಷ್ಟು ಭೂಮಿ ಉಳುಮೆ ಮಾಡಲು ಸಹಾಯವಾಗುತ್ತದೆ ಎಂದು ರೈತರು ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಕೊಟ್ಟರು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಹಲವಾರು ರೈತರು ತಮ್ಮ ಹೊಲ ಗದ್ದೆಗಳಿಗೆ ತೆರಳಲು ದಾರಿಯಲ್ಲಿ ಮುಳ್ಳು ಕಂಠಿ ಬೆಳದಿದ್ದು,ತಮ್ಮ ಹೊಲಗಳಿಗೆ ಹೋಗಲು ರೈತರು ಪರದಾಟ ನಡೆಸುತ್ತಿದ್ದಾರೆ ಕೂಡಲೇ ಹಣದಿ ಸಿದ್ಧಪಡಿಸಬೇಕೆಂದು ಭಾರತೀಯ ಕಿಸಾನ್ ಸಂಘ ತಾಲೂಕು ಅಧ್ಯಕ್ಷ ಭೀಮರಾಯ ಮಲಗಾಣ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಲರಾಮ ವಲ್ಲಾಪುರೆ.ರೇವಣಸಿದ್ದ ಪೂಜಾರಿ.ಸುನಿಲ ರಾಜಪುರ.ರಾಜಕುಮಾರ ರಾಸೂರ್ ಇದ್ದರು.
ವರದಿ: ಹಣಮಂತ ಕುಡಹಳ್ಳಿ




