ಸೇಡಂ:- ನಗರಕ್ಕೆ ಹೊಂದಿಕೊಂಡಿರುವ ಬೃಹತ್ ವಾಸವದತ್ತಾ ಸಿಮೆಂಟ್ ಕಾರ್ಖಾನೆಯವರು ಪುರಸಭೆ ಸೇಡಂರವರಿಗೆ ಸುಮಾರು ೭೦ ರಿಂದ ೮೦ ಕೋಟಿ ರೂಪಾಯಿ ತೆರಿಗೆ ಬಾಕಿ ಇದ್ದು ಅದನ್ನು ಇಲ್ಲಿಯವರೆಗೆ ಕಟ್ಟಿರುವುದಿಲ್ಲ. ಇದರ ಬಗ್ಗೆ ಪುರಸಭೆ ಅಧಿಕಾರಿಗಳು ಕೂಡ ಇತ್ತ ಕಡೆ ಗಮನ ಕೊಡುತ್ತಿಲ್ಲ.
ಇದರಿಂದ ಪುರಸಭೆ ಅಧಿಕಾರಿಗಳು ಕೂಡ ಶಾಮಿಲ್ ಆಗಿದ್ದಾರೆ ಎಂಬ ಅನುಮಾನ ಕೂಡ ಮೂಡಿ ಬರುತ್ತಿದೆ. ಅದ ಕಾರಣ ವಾಸವದತ್ತಾ ಕಂಪನಿ ವಿರುದ್ಧ ಮತ್ತು ಪುರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕ ಅಧ್ಯಕ್ಷರಾದ ಭೀಮಾಶಂಕರ ಕೊರವಿ ಅವರು ದಿನಾಂಕ ೨೯/೦೧/೨೦೨೫ ರಂದು ಸೇಡಂ ತಹಶೀಲ್ದಾರರ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.