
——————————————————–ಶ್ರಾವಣ ಮಾಸದ ಮೂರನೇ ಶನಿವಾರ ನಿಮಿತ್ತ ಕಾರ್ಯಕ್ರಮ
ಸೇಡಂ: ತಾಲೂಕಿನ ಮೋತಕಪಲ್ಲಿ ಶ್ರೀ ಬಲ ಭೀಮಸೇನ ದೇವಸ್ಥಾನವು ಶ್ರಾವಣ ಮಾಸ ಮೂರನೇ ಶನಿವಾರ ನಿಮಿತ್ತ ಭಕ್ತ ಜನರಿಂದ ತುಂಬಿದ ದೃಶ್ಯ ಕಂಡು ಬಂತು.
ಹಿಂದೂ ಧರ್ಮದ ಮಹತ್ವಪೂರ್ಣವಾದ ಈ ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರ ಉಪವಾಸ ಮಾಡುತ್ತಾರೆ.
ಶ್ರಾವಣ ಮಾಸದಲ್ಲಿ ಐದು ಶನಿವಾರಗಳಿದ್ದರೂ ಭಕ್ತ ಜನರು ಮೂರನೇ ಶನಿವಾರಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡುವರು. ಈ ನಿಟ್ಟಿನಲ್ಲಿ ಸೇಡಂ ತಾಲೂಕಿನ ಪ್ರಸಿದ್ಧ ಐತಿಹಾಸಿಕ ದೇವಸ್ಥಾನವಾದ ಮೋತಕಪಲ್ಲಿ ಶ್ರೀ ಬಲ ಭೀಮಸೇನ ದೇವಸ್ಥಾನಕ್ಕೆ ಭಕ್ತ ಜನರು ಆಗಮಿಸಿ ತಮ್ಮ ಹಾರೈಕೆಗಳನ್ನು ಹೇಳಿಕೊಳ್ಳುತ್ತಾರೆ.
ಭಕ್ತ ಜನರ ಸಂಖ್ಯೆ ಹೆಚ್ಚಾಗಿರುವುದರಿಂದ ಮುಧೋಳ್ ಪೊಲೀಸ್ ಠಾಣೆಯ ಅಧಿಕಾರಿಗಳು ಬಂದೋಬಸ್ತ್ ಏರ್ಪಡಿಸಿ ಭಕ್ತ ಜನರ ಸುರಕ್ಷತೆಗೆ ಪಾತ್ರರಾದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




