ಸೇಡಂ:- ತಾಲೂಕಿನ ಗಡಿಭಾದ ಮುಧೋಳ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆಲಂಗಣದಿಂದ ಕೆಲವು ವ್ಯಕ್ತಿಗಳು ನಾಯಿಗಳನ್ನು ಬಿಟ್ಟು ಹೋಗುತ್ತಿದ್ದಾರೆ.
ಇದರಿಂದ ನಮ್ಮ ಗಡಿಭಾಗದ ಜನರಿಗೆ ತುಂಬಾ ತೊಂದರೆಯಾಗಿದೆ ಅಷ್ಟೇ ಅಲ್ಲದೆ ಇದರಿಂದ ವಾಹನಗಳು ತಿರುಗಾಡುವ ಸಮಯದಲ್ಲಿ ನಾಯಿಗಳು ಎದುರು ಬಂದು ಅಪಘಾತಗಳು ಸಂಭವಿಸುತ್ತಿವೆ.
ನಾಯಿಗಳ ಕಾಟದಿಂದ ಅನೇಕ ಜನರು ಸಾವನ್ನಪ್ಪಿದ್ದರೆ.
ನೇರರಾಜ್ಯದಿಂದ ಬಂದು ಬಿಡುತ್ತಿರುವ ವ್ಯಕ್ತಿಗಳು ಯಾರು ಎಂಬುದು ಪರಿಶೀಲನೆ ನಡಿಸಬೇಕು.
ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತಡೆಹಿಡಿಯಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಡಿಎಂಎಸ್ಎಸ್ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಡಿಎಂಎಸ್ಎಸ್ ಮುಧೋಳ್ ವಲಯ ಅಧ್ಯಕ್ಷರಾದ ಭೀಮು ಮುಧೋಳ್ ಪತ್ರಿಕಾ ಪ್ರಕಟಣೆ ಮುಖಾಂತರ ಆಗ್ರಹ ವ್ಯಕ್ತಪಡಿಸಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.