ಸೇಡಂ: ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದಲ್ಲಿ ದಿನಾಂಕ:7-6-2025 ರಂದು,ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಬಹಳ ನೋವಿನ ಸಂಗತಿ,ಇಡೀ ಜಗತ್ತೇ ಡಾ.ಬಾಬಾ ಸಾಹೇಬ್ ಅವರನ್ನು ಗೌರವಿಸುತ್ತದೆ, ಆದರೆ ನಮ್ಮ ಭಾರತ ದೇಶದಲ್ಲಿ ಪದೇ ಪದೇ ಬಾಬಾ ಸಾಹೇಬರನ್ನು ಅವಮಾನ ಮಾಡಿದ್ದು ನಮಗೆ ನಾಚಿಕೆಗೇಡಿನ ಸಂಗತಿ,ಬಾಬಾ ಸಾಹೇಬರು ಒಂದೇ ಜಾತಿ ಒಂದೇ ಧರ್ಮಕ್ಕೆ ಕೆಲಸ ಮಾಡಿಲ್ಲ ಭಾರತದಲ್ಲಿ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಯ ಸಲುವಾಗಿ ಸೇವೆ ಮಾಡಿದ್ದಾರೆ, ಬಾಬಾ ಸಾಹೇಬರ ಜ್ಞಾನ ತಿಳಿಯದ ಜನರು ಅವಮಾನ ಮಾಡುತ್ತಿದ್ದಾರೆ , ಕೂಡಲೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಸೇಡಂ ತಾಲೂಕಿನ ಮಳಖೇಡ ವಲಯ ಮುಖಂಡರಾದ ಭಗವಾನ್ ಭೋಚ್ಚಿನ್ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




