ನಿಪ್ಪಾಣಿ:ಭೋಜ ವಿವಿಧೋದ್ದೇಶ ಕೃಷಿ ಸಹಕಾರ ಸಂಘಕ್ಕೆ 65ಲಕ್ಷ 7ಸಾವಿರ ರೂ ಲಾಭ ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ಸುದರ್ಶನ್ ಮೂರಾಬಟ್ಟೆ ಅವರಿಂದ ಮಾಹಿತಿ.
ಭೋಜ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ 65 ಲಕ್ಷ 7 ಸಾವಿರ ರೂಪಾಯಿ ಲಾಭ ಬಂದಿರುವುದಾಗಿ ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ಸುದರ್ಶನ ಮೂರಾಬಟ್ಟೆ ತಿಳಿಸಿದರು. ಸಂಸ್ಥೆಯ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆಯ ಸದಸ್ಯರ ಸಹಕಾರ,ಸಾಲುಗಾರರು ಸಕಾಲಕ್ಕೆ ಸಾಲ ಮರುಪಾವತಿಸಿದ್ದರಿಂದ ಹಾಗೂ ನಮ್ಮ ಸಂಸ್ಥೆಯ ಸಿಬ್ಬಂದಿ ವರ್ಗದವರಿಂದ ತತ್ಪರ ಸೇವೆ ಠೇವುದಾರರು ಸಾಲಗಾರರು ಹಾಗೂ ಸಂಸ್ಥೆಯ ಗ್ರಾಹಕರೊಂದಿಗೆ ವಿನಮ್ರ ಸೇವೆ ಸಲ್ಲಿಸುತ್ತಿರುವುದರಿಂದ ಸಾಲು-ವಸುಲಾತಿಗೆ ಸಹಕಾರಿಯಾಗುತ್ತಿದೆ ಎಂದರು.
ಇದೆ ವೇಳೆಗೆ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕರಾದ ರಾಜಗೌಡಾ ಪಾಟೀಲ ಉಪಾಧ್ಯಕ್ಷೆ ಶ್ರೀಮತಿ ರಂಜನಾ ಮೂರಾಬಟ್ಟೆ ಅವರ ಮುಖ್ಯ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಮೂರುವರೆ ದಶಕಗಳ ಕಾಲಾವಧಿಯಲ್ಲಿ ಸಂಸ್ಥೆಯು ಆರ್ಥಿಕ ಸಮೃದ್ಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಖರ ಮಟ್ಟಕ್ಕೆ ತಲುಪಿದ್ದು ಮುಂಬರುವ ವರ್ಷದಲ್ಲಿ ದಾಖಲೆ ಠೇವು ಹಾಗೂ ರೈತರಿಗೆ ಅಧಿಕ ಬೆಳೆಸಾಲ ನೀಡಲು ಹೆಜ್ಜೆ ಹಾಕುತ್ತಿದ್ದೇವೆ ಎಂದರು ಇದೇ ಸಂದರ್ಭದಲ್ಲಿ ಅಧ್ಯಕ್ಷ ಡಾಕ್ಟರ ಸುದರ್ಶನ ಮೂರಾಬಟ್ಟೆಯವರು ಸಂಸ್ಥೆಯ ಆರ್ಥಿಕ ಸ್ಥಿತಿ ವಿವರಿಸಿದರು ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 2680 ಸದಸ್ಯರನ್ನು ಹೊಂದಿದ್ದು 1 ಕೋಟಿ 94ಲಕ್ಷ ರೂಪಾಯಿ ಶೇರ್ ಬಂಡವಾಳ.2 ಕೋಟಿ 51 ಲಕ್ಷ ರೂಪಾಯಿ ನಿಧಿ, 22ಕೋಟಿ 42ಲಕ್ಷ ರೂಪಾಯಿ ಠೇವು, ಸಂಗ್ರಹಿಸಿದ್ದು ಸಂಸ್ಥೆಯು ಬಿಡಿಸಿಸಿ ಬ್ಯಾಂಕ ಇತರೇ ಸಂಸ್ಥೆಗಳಲ್ಲಿ 1 ಕೋಟಿ 27 ಲಕ್ಷ ರೂಪಾಯಿ ಕಾಯ್ದಿರಿಸಿದ್ದು ಒಟ್ಟು 13ಕೋಟಿ63 ಲಕ್ಷ ರೂಪಾಯಿ ಗುಂಟಾವಣೆ ಮಾಡಲಾಗಿದೆ.
ಸ ದಸ್ಯರಿಗೆ 17 ಕೋಟಿ 36 ಲಕ್ಷ ರೂಪಾಯಿ ಸಾಲ ವಿತರಿಸಿ ಸಕಾಲಕ್ಕೆ ಮರು ಪಾವತಿಸಿಕೊಂಡಿದ್ದರಿಂದ ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಗೆ ದಾಖಲೆ 65. ಲಕ್ಷ .7.ಸಾವಿರ ರೂಪಾಯಿ ಲಾಭ ಬಂದಿರುವುದಾಗಿ ತಿಳಿಸಿ 44.ಕೋಟಿ 27. ಲಕ್ಷ ರೂಪಾಯಿ ವರ್ಷಾಂತ್ಯಕ್ಕೆ ದುಡಿಯುವ ಬಂಡವಾಳ ಹೊಂದಿದೆ ಎಂದರು.ಪಾರದರ್ಶಕ ಆಡಳಿತ ಗ್ರಾಹಕರಿಗೆ ಸಕಾಲಕ್ಕೆ ಸೇವೆ ಒದಗಿಸುತ್ತಿರುವುದರಿಂದ ಸಂಸ್ಥೆಗೆ ಲೆಕ್ಕಪರಿಶೋಧನೆಯಲ್ಲಿ ನಿರಂತರ ಅಡಿಟ್ ಅ ವರ್ಗ ಸಂಪಾದಿಸುತ್ತಿರುವುದಾಗಿ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಪ್ರಶಾಂತ್ ಪಾಟೀಲ್ ಸಚಿನ್ ಕೇಸ್ತೆ ಅಮೋಲ ಮೂರಾಬಟ್ಟೆ, ಚಂದ್ರಕಾಂತ ಪಾಟೀಲ್ ಸುನಿಲ್ ಪಾಟೀಲ, ಭರತ ಗುರವ,ಶ್ರೀಮತಿ ಇಂದ್ರಾಯಣಿ ಮಾನೆ, ರಾಜೇಂದ್ರ ಮಾನೆ, ಅಶ್ವಿನಿ ಮಮದಾಪುರೆ,ಸಂತೋಷ ಚವಾನ ಸೇರಿದಂತೆ ಸರ್ವ ಸಂಚಾಲಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ