ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸಮೀಪದ ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಶನ್ ಸಭಾಂಗಣದಲ್ಲಿ ಬಸವ ಜಯಂತಿ ಆಚರಿಸಿ, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಇದೆ ವೇಳೆ ಭಕ್ತಾದಿಗಳಿಗೆ ಸಿಹಿ ಹಂಚಲಾಯಿತು.
ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್ ಜಯದೇವ್,ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ, ಗೌರವ ಅಧ್ಯಕ್ಷ ಗುರುನಾಥ್, ವೀರಶೈವ ಮುಖಂಡ ಎಂ.ಎಚ್. ಪಾಟೀಲ್ ,ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ಸದಾಶಿವ, ವಿಷ್ಣು, ಲಲಿತಾ ನೀಲಕಂಠ, ಪ್ರಸನ್ನ ಕುಮಾರ್,ಸವಿತಾ, ಚೈತ್ರ, ಭೂಮಿಕ ಮುಂತಾದವರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




