Ad imageAd image

ಪೋಲೀಸ್ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

Bharath Vaibhav
ಪೋಲೀಸ್ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
WhatsApp Group Join Now
Telegram Group Join Now

ಸಿರುಗುಪ್ಪ : –ನಗರದ ಪೋಲೀಸ್ ವಸತಿ ಗೃಹದ ಆವರಣದಲ್ಲಿ ಕರ್ನಾಟಕ ರಾಜ್ಯ ಪೋಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದಡಿಯಲ್ಲಿ ನೂತನ 24 ಪೋಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶಾಸಕ ಬಿ.ಎಮ್.ನಾಗರಾಜ ಅವರು ಭೂಮಿಪೂಜೆ ಸಲ್ಲಿಸಿದರು.

ನಂತರ ಮಾತನಾಡಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಸತಿ ಗೃಹ ನಿರ್ಮಾಣದ ಕಾಮಗಾರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರು ಮುತುವರ್ಜಿ ವಹಿಸಿ ಬಹಳ ಬೇಗನೇ ಕಾಮಗಾರಿ ಆರಂಭಕ್ಕೆ ಚಾಲನೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿನ ಸಿಬ್ಬಂದಿಗಳಿಗೆ ವಸತಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಎಸ್.ಪಿ.ಶೋಭಾರಾಣಿ ಅವರು ಮಾತನಾಡಿ ವಸತಿಯ ಕಟ್ಟಡಗಳು ಬಹಳ ವರ್ಷಗಳು ಬಾಳಿಕೆ ಬರುವಂತೆ ನಿರ್ಮಾಣದಲ್ಲಿ ಇಂಜಿನೀಯರ್ ಹಾಗೂ ಗುತ್ತಿಗೆದಾರರು ಗುಣಮಟ್ಟತೆಯನ್ನು ಕಾಪಾಡಬೇಕು. ಇದರಿಂದ ಸಿಬ್ಬಂದಿಗಳಿಗೆ ಅನುಕೂಲವಾಗಬಹುದು.

ಏಕೆಂದರೆ ಸಮಾಜದಲ್ಲಿನ ಶಿಸ್ತು ಶಾಂತಿ ಭದ್ರತೆಯ ಬುನಾದಿ ಹಾಕುವ ನಮ್ಮ ಸಿಬ್ಬಂದಿಗಳಿಗೂ ಡ್ಯೂಟಿ ಮುಗಿದ ಮೇಲೆ ಮನೆಗೆ ಹೋದ ಮೇಲೆ ಅಲ್ಲಿನ ಪರಿಸರ ಮತ್ತು ಮನೆಯಲ್ಲಿ ಸ್ವಲ್ಪ ನೆಮ್ಮದಿ ಇರಬೇಕೆಂಬುದು ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಡಿವೈಎಸ್‌ಪಿ ವೆಂಕಟೇಶ್, ಸಿಪಿಐ ಸುಂದ್ರೇಶ್ ಹೊಳೆಣ್ಣನವರ್, ಹನುಮಂತಪ್ಪ, ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಪರಶುರಾಮ್, ಅಪರಾಧ ವಿಭಾಗದ ಪಿ.ಎಸ್.ಐ ಹೊನ್ನಪ್ಪ, ನಗರಸಭೆ ಸದಸ್ಯ ಹೆಚ್.ಗಣೇಶ, ಮುಖಂಡರಾದ ವೆಂಕಟೇಶ, ದೇವರಮನೆ ನಾಗಪ್ಪ, ಬಿ.ಉಮೇಶಗೌಡ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.

ವರದಿ.ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!