
ಸಿರುಗುಪ್ಪ: ನಗರದ ಪಶು ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕಾಡಳಿತ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳ ಸಹಯೋಗದಲ್ಲಿ ನಡೆದ ಪಶು ಆಸ್ಪತ್ರೆಯ ನೂತನ ಕಟ್ಟಡದ ನಿರ್ಮಾಣಕ್ಕೆ ಶಾಸಕ ಬಿ.ಎಮ್.ನಾಗರಾಜ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.
ನಂತರ ಮಾತನಾಡಿ ಆರ್.ಐ.ಡಿ.ಎಫ್ 30ರ ಯೋಜನೆಯಡಿ 49 ಲಕ್ಷ 96 ಸಾವಿರ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ನೂತನ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಗುತ್ತಿಗೆದಾರರು ಗುಣಮಟ್ಟತೆಯನ್ನು ಕಾಪಾಡಬೇಕು ಎಂದರು.

ಇದೇ ವೇಳೆ ಉಪನಿರ್ದೇಶಕ ಡಾ.ಸದಾಶಿವ ಉಪ್ಪಾರ, ಮುಖ್ಯ ಪಶು ವೈದ್ಯಾಧಿಕಾರಿ ಗಂಗಾದರ, ಹಿರಿಯ ಪಶುವೈದ್ಯ ಪರೀಕ್ಷಕ ಟಿ.ಹುಚ್ಚೀರಪ್ಪ, ಸಿಬ್ಬಂದಿಗಳಾದ ಎನ್.ಶ್ರೀನಿವಾಸ, ಕೆ.ತಿಪ್ಪೆಸ್ವಾಮಿ, ಬಿ.ರಾಘವೇಂದ್ರ, ಗುತ್ತಿಗೆದಾರ ಬಸಪ್ಪ ಹನಕುಂಟೆ ಮುಖಂಡರಾದ ಜಡೆಸ್ವಾಮಿ, ಬಿ.ವೆಂಕಟೇಶ ಹಾಗೂ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ




