ಸೇಡಂ: ಮುಧೋಳ ಪೊಲೀಸ್ ಠಾಣೆಯ ವ್ಯಾಪ್ತಿಯ ಭೂತಪೂರ ಗ್ರಾಮದಲ್ಲಿ ದಿನಾಂಕ 30.01.2026 ರಂದು ಫಿರ್ಯಾದಿ ಕಾಶಿನಾಥ ತಂದೆ ಸಾಯಪ್ಪ ಏನಿಕಿ ವಯಸು 32 ವರ್ಷ ಕಬ್ಬಲಿಗ ಒಕ್ಕಲುತನ ಭೂತಪುರ ಇವರು 29.01.2026 ರಂದು ಬೆಳಿಗ್ಗೆ 9ಸುಮಾರಿಗೆ ತನ್ನ ಕುಟುಂಬ ಸಮೇತ ಮತ್ತು ತಂಗಿಯಾದ ಲಕ್ಷ್ಮಿ ಮತ್ತು ತಂಗಿಯ ಗಂಡನಾದ ಅನಂತಪ್ಪ ಹೀಗೆ ಎಲ್ಲರು ಕೂಡಿ ಹೊಲದಲ್ಲಿನ ಶೇಂಗವನ್ನು ಮಷೀನ್ ಗೆ ಹಾಕಲೆಂದು ಹೋಗಿರುತ್ತನೆ .
ನಂತರ ಮಧ್ಯಾಹ್ನ 1:50ರ ಸುಮಾರಿಗೆ ನಾನು ಚೀಲಗಳು ತರಲೆಂದು ಮನೆಗೆ ಬಂದು ಚೀಲಗಳನ್ನು ತಗೊಂಡು ಮನೆಗೆ ಕೀ ಹಾಕಿಕೊಂಡು ಹೋಗಿದ್ದೆ ಮರಳಿ 4ಗಂಟೆಗೆ ಮನೆಗೆ ಬಂದು ನೋಡಿದರೆ ಮನೆಯಲ್ಲಿದ್ದ 113ಗ್ರಾಂ ಚಿನ್ನ, 444ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ 10ಸಾವಿರ ರೂಪಾಯಿ ಮನೆಯ ಕೀ ಒಡೆದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ ಮೂಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

ಸದರಿ ಪ್ರಕರಣದಲ್ಲಿ ಸಿಲಾರಕೂಟ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 1] ಶ್ರೀನಿವಾಸ್ ತಂದೆ ಸಾಯಪ್ಪ ಬೈರಂಗೊಂಡ, ಹಾಗೂ 2) ನವೀನ ತಂದೆ ನರಸಪ್ಪ ಕುರುಕು ರವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಭೂತಪೂರ ಗ್ರಾಮದಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು ಆರೋಪಿತರಿಂದ 3.3 ತೋಲಾ ಚಿನ್ನದ ಸರ, 3ತೋಲ ಬಂಗಾರದ ನಾನ್, 2ತೋಲಾ ಬಂಗಾರದ ಲ್ಯಾಕೆಟ್, 3ತೋಲ ಬಂಗಾರದ ನಾನ್, ಹಾಗೂ ಬೆಳ್ಳಿಯ 12ತೋಲ ಕಾಲು ಚೈನಾಗಳು, 11 ತೋಲಾ ಬೆಳ್ಳಿ ಕೈಕಡಗೆ ಹಾಗೂ ಇತರೆ ಬೆಳ್ಳಿ ಸಾಮಾನು ಸೇರಿ ಒಟ್ಟು 444 ಗ್ರಾಂ 1,00,000/- ಹೀಗೆ ಒಟ್ಟು 16.5 ಲಕ್ಷದ 113 ಗ್ರಾಂ ಬಂಗಾರ, 444 ಗ್ರಾಂ ಬೆಳ್ಳಿ ಆಭರಣಗಳನ್ನು ಆರೊಪಿತರಿಂದ ವಶಪಡಿಸಿಕೊಳ್ಳಲಾಗಿದೆ.
ಕಳ್ಳತನ ಪ್ರಕರಣ ಕುರಿತು ಕಲಬುರಗಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಅಡ್ಡೂರು ಶ್ರೀನಿವಾಸಲು ಐಪಿಎಸ್ ರವರು ಹಾಗೂ ಮಹೇಶ ಮೇಘಣ್ಣನವರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಲಬುರಗಿ ಹಾಗೂ ಸಂಗಮನಾಥ ಎಸ್. ಹಿರೇಮಠ ಚಿಂಚೋಳಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದೌಲತ್ ಎನ್.ಕೆ ಪಿ.ಐ ಮುಧೋಳ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಮುಧೋಳ ಠಾಣೆಯ ಮುರುಡೇಶ್ವರ ಪ್ರೋಪಿ.ಎಸ್.ಐ [ತನಿಖೆ] ಹಾಗೂ ಸಿಬ್ಬಂದಿಯವರಾದ ಭೀಮಪ್ಪ ಎಎಸ್ಐ, ಶಂಕರಗೌಡ ಪಿಸಿ579, ವೀರಾರೆಡ್ಡಿ ಪಿಸಿ 126 ಇವರು ಕಳ್ಳತನ ಮಾಡಿ ನಾಪತ್ತೆಯಾದ ಸದರಿ ಆರೋಪಿತರನ್ನು ಪತ್ತೆ ಮಾಡಿ ಇವರಿಂದ ಕಳ್ಳತನ ಮಾಲು ವಶಪಡಿಸಿಕೊಂಡು ಸದರಿ ಆರೋಪಿತರಿಗೆ ದಿನಾಂಕ 03.02.2026 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಸದರಿ ಕಾರ್ಯಾಚರಣೆಯನ್ನು ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಅಡ್ಡೂರು ಶ್ರೀನಿವಾಸುಲು ಐಪಿಎಸ್ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




