ನವದೆಹಲಿ: ರಾಪರ್ ಕಾನ್ಯೆ ವೆಸ್ಟ್ ಗ್ರ್ಯಾಮಿಗೆ ಬಂದಿದ್ದು, ಅವರ ಪತ್ನಿಯ ವೇಷಭೂಷಣ ನೋಡುಗರ ಹುಬ್ಬೇರುವಂತೆ ಮಾಡಿದೆ. ರೆಡ್ ಕಾರ್ಪೆಟ್‌ನಲ್ಲಿ ನಡೆಯುವಾಗ, ಅವರ ಪತ್ನಿ ಬಿಯಾಂಕಾ ಸೆನ್ಸೋರಿ ತಮ್ಮ ಮೇಲ್ಮೈ ಕೋಟ್ ಅನ್ನು ತೆಗೆದುಹಾಕಿದಾಗ, ಪಾರದರ್ಶಕ ಉಡುಗೆಯಿಂದ ನಗ್ನವಾಗಿ ಇರುವಂತೆ ತೋರ್ಪಡಿಸಿತು.
ಒಟ್ಟಿಗೆ ಜೋಡಿಯು ಆಗಮಿಸಿದ್ದು, ತಮ್ಮ ಉಡುಪನ್ನು ಬಹಿರಂಗಪಡಿಸಿದ ನಂತರ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದರು.
ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ನಂತರ, ವೆಸ್ಟ್ ಮತ್ತು ಸೆನ್ಸೋರಿ ಅಲ್ಲಿಂದ ಮುಂದೆ ಎಲ್ಲಿಯೂ ಕಾಣಿಸಲಿಲ್ಲ. ಈ ಜೋಡಿಯನ್ನು ಈವೆಂಟ್‌ನಿಂದ ಹೊರಹಾಕಲಾಗಿದೆ ಮತ್ತು ಭಾಗವಹಿಸಲು ಅವರಿಗೆ ಅಧಿಕೃತವಾಗಿ ಆಹ್ವಾನಿಸಲಾಗಿಲ್ಲ ಎಂಬ ವರದಿಯು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆದರೆ, ಗ್ರಾಮಿಗೆ ಹತ್ತಿರವಿರುವ ಮತ್ತೊಂದು ಮೂಲವು ಈ ವಿಷಯವನ್ನು ಅಲ್ಲಗೆಳೆದಿದ್ದು, ವೆಸ್ಟ್ ಕಾರ್ಪೆಟ್‌ನಲ್ಲಿ ನಡೆದ ಬಳಿಕ, ಅವರ ಕಾರಿನಲ್ಲಿ ಹೊರಟರು ಎಂದು ತಿಳಿಸಿದೆ.