Ad imageAd image

ಮಾ. 1 ರಂದು ಬೃಹತ್ ರಕ್ತದಾನ ಶಿಬಿರ:-ದತ್ತಮೂರ್ತಿ ಕುಲಕರ್ಣಿ

Bharath Vaibhav
ಮಾ. 1 ರಂದು ಬೃಹತ್ ರಕ್ತದಾನ ಶಿಬಿರ:-ದತ್ತಮೂರ್ತಿ ಕುಲಕರ್ಣಿ
WhatsApp Group Join Now
Telegram Group Join Now

ಹುಬ್ಬಳ್ಳಿ: ಸಮಸ್ತ ಬ್ರಾಹ್ಮಣ ಸಮಾಜ ಮತ್ತು ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತಕೇಂದ್ರ ಹಾಗೂ ಸೃಷ್ಟಿ ರಾಷ್ಟ್ರೋತ್ಥಾನ ಪ್ರಯೋಗಾಲಯ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಮಾ. 1 ರಂದು ನಗರದ ಭವಾನಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೋತ್ಥಾನ ರಕ್ತಕೇಂದ್ರದ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಅಂದು ಬೆ. 8 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಶ್ರೀ ಗುರು ರಾಘವೇಂದ್ರರ 431 ನೇ ವರ್ಧಂತಿ ಉತ್ಸವ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ರಾಯರ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಕರೆ ನೀಡಿದರು.

ಇದು ಏಳನೇ ಬಾರಿ ರಕ್ತದಾನ ಶಿಬಿರವಾಗಿದ್ದು, ಈ ಬಾರಿ 500 ಜನರು ರಕ್ತದಾನ ಮಾಡಿಸುವ ಗುರಿ ಹೊಂದಲಾಗಿದೆ‌ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಕುಲಕರ್ಣಿ, ಕೆ.ಡಿ‌ ಕುಲಕರ್ಣಿ, ವೆಂಕಟೇಶ ದಿವಾನ, ಕಿರಣ್ ಗಡ ಪಾಲ್ಗೊಂಡಿದ್ದರು.

ವರದಿ: ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!