Ad imageAd image

ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರ ಸ್ವಾಭಿಮಾನಿ ಕಾರ್ಯಕರ್ತ ಬೃಹತ್ ಸಮ್ಮೇಳನ

Bharath Vaibhav
ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರ ಸ್ವಾಭಿಮಾನಿ ಕಾರ್ಯಕರ್ತ ಬೃಹತ್ ಸಮ್ಮೇಳನ
WhatsApp Group Join Now
Telegram Group Join Now

 ಬಾದಾಮಿ:- ನಗರದ ಹೊರವಲಯದ ಬನಶಂಕರಿ ಬಡಾವಣೆಯಲ್ಲಿ ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ಸಮೀತಿ ಹಾಗೂ ಶ್ರೀ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಸಯುಕ್ತ ಪಾಟೀಲ್ ಅವರ ಪರವಾಗಿ ಸ್ವಾಭಿಮಾನಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಮತಯಾಚನೆ ಮಾಡುವ ಕಾರ್ಯಕ್ರಮವನ್ನು ಯುವ ಮುಖಂಡರಾದ ಹೊಳಬಸು ಶೆಟ್ಟರ ರವರ ನೇತೃತ್ವದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ನಾಡಗೀತೆ ಹಾಡಿ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.

ಇತ್ತೀಚಿಗಷ್ಟೇ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಬಣದವರಿಂದ ಕಾರ್ಯಕರ್ತರ ಸಮಾವೇಶ ನಡೆದಿತ್ತು ನಿನ್ನೆ ನಡೆದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ ನೇತೃತ್ವದಲ್ಲಿ ಅದನ್ನು ಮೀರಿಸಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದರು. ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಟ್ರಾಫಿಕ್ ಜಾಮ್ ಆಗಿಹೋಗಿತ್ತು ಅಷ್ಟೊಂದು ಜನಸಮೂಹವನ್ನು ಸೇರಿಸಿ ಹೊಳಬಸು ಶಟ್ಟರ್ ಸಾರತ್ಯದ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಸಂಯುಕ್ತ ಪಾಟೀಲ್ ಪರ ಪ್ರಚಾರಕ್ಕೆ ಮಾತಾಯಾಚನೆ ಮಾಡಲು ಶಕ್ತಿ ಪ್ರದರ್ಶನ ಮಾಡಿತು ಎನ್ನಲಾಗಿದೆ.

ಕಾರ್ಯಕ್ರಮವನ್ನು ಸಚಿವರಾದ  ಶಿವಾನಂದ ಪಾಟೀಲ್ ರವರು ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಹನಮಂತಗೌಡ ಯಕ್ಕಪ್ಪನವರ ವಹಿಸಿದ್ದರು ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳು ಮಹೇಶ್ ಹೊಸಗೌಡ್ರ ,ಶಿವಕುಮಾರ್ ತಾಳಂಪಳ್ಳಿ,
ಹಿರಿಯರಾದ ಎಂ. ಬಿ.ಹಂಗರಗಿ,,ಪಿ.ಆರ್.ಗೌಡರ,ರಾಜಮಹ್ಮದ ಬಾಗವಾನ,ಮಲ್ಲಣ್ಣ ಯಲಿಗಾರ,ಹನಮಂತ ದೇವರಮನಿ,ಶಶಿ ಉದಗಟ್ಟಿ,ಬಸವರಾಜ ಡೊಳ್ಳಿನ,ಮಧು ಯಡ್ರಾಮಿ,ನಾಗಪ್ಪ ಅಡಪಟ್ಟಿ,ರೇವಣಸಿದ್ದಪ್ಪ ನೋಟಗಾರ ,ಪಾಂಡು‌ ಕಟ್ಡಿಮನಿ,ಪರಶುರಾಮ ರೋಣದ,ರಫೀಕ ಕಲಬುರಗಿ,
ಯಮನವ್ವ ಹೊಸಗೌಡರ,ನಾಗೇಶ ಪಾಗಿ,ಶ್ಯಾಮ ಮೇಡಿ,
ಮೆಹಬೂಬ್ ಕಂಟ್ರ್ಟಾಕ್ಡರ್, ಅಮಾತೆಪ್ಪ ಕೊಪ್ಪಳ,ಎಸ್. ಎಮ್.ಪಾಟೀಲ, ಹನಮಂತಗೌಡ ಗೌಡರ,ಮಹಾಂತೇಶ ಲಕ್ಕುಂಡಿ, ಬಾದಾಮಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!