Ad imageAd image

ಅರಣ್ಯ ಇಲಾಖೆಯಿಂದ ತಳೆವಾಡಿ ಗ್ರಾಮದ ಜನತೆಗೆ ಸಿಕ್ತು Big ಗಿಫ್ಟ್

Bharath Vaibhav
ಅರಣ್ಯ ಇಲಾಖೆಯಿಂದ ತಳೆವಾಡಿ ಗ್ರಾಮದ ಜನತೆಗೆ ಸಿಕ್ತು Big ಗಿಫ್ಟ್
WhatsApp Group Join Now
Telegram Group Join Now

ಖಾನಾಪುರ: ಹೌದು ಅರಣ್ಯ ಇಲಾಖೆ ವತಿಯಿಂದ ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪ್ರಕೃತಿ ಶಿಬಿರದಲ್ಲಿ ಏರ್ಪಡಿಸಿದ್ದ ತಳೆವಾಡಿ ಗ್ರಾಮದ ಜನರ ಒಕ್ಕೊರಲ ಸ್ವ- ಇಚ್ಛಾ ಪುನರ್ವಸತಿ ಯೋಜನೆಯಡಿ ಆಯ್ದ 27 ಕುಟುಂಬಗಳಿಗೆ 15 ಲಕ್ಷಗಳ ಪರಿಹಾರ ಘೋಷಣೆಯಾಗಿ, ಮೊದಲನೇ ಕಂತಿನಲ್ಲಿ ಇಂದು 10 ಲಕ್ಷಗಳ ಚೆಕ್ ಅನ್ನು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಾನಾಪುರ ಶಾಸಕ ವಿಠಲ ಹಲಗೇಕರ್, ನೇರಸೆ ಗ್ರಾ.ಪಂ ಅಧ್ಯಕ್ಷೆ ಬೀಬಿ ಜಾನ್ ಮುಲ್ಲಾ ರವರಿಂದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮಹಮದ್ ರೋಷನ್, ಎಸ್.ಪಿ ಬೀಮಾಶಂಕರ ಗುಳೇದ್, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಆದ ಸುಭಾಷ್ ಮಲ್ಪಡೆ ಹಾಗೂ ರಾಧದೇವಿ , ಮಂಜುನಾಥ್ ಚೌಹಾಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಶ್ರೀ ಮರಿಯ ಕ್ರಿಸ್ತು ರಾಜಾ ಸೇರಿದಂತೆ ಎಲ್ಲಾ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಸುತ್ತಮುತ್ತಲ ಅರಣ್ಯ ವಾಸಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಸಸಿಗೆ ನೀರು ಎರೆದು ಉದ್ಘಾಟನೆ ಮಾಡಿದ ಗಣ್ಯರು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಅರಣ್ಯ ವಾಸಿಗಳ ಹಿತಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಇನ್ನೊಂದು ಕಡೆ ಖಾನಾಪುರ ಶಾಸಕ ವಿಠಲ ಹಲಗೇಕರ್ ಮಾತನಾಡಿ ಜನರಿಗೆ ಮನೆಕಟ್ಟಿಕೊಳ್ಳಲು ಸರ್ಕಾರದಿಂದ ಜಮೀನು ನೀಡುವಂತೆ ಒತ್ತಾಯ ಮಾಡಿದರು.

ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ್ ಕಂಡ್ರೆ ಅರಣ್ಯವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕೊಟ್ಟು ಮುಖ್ಯ ವಾಹಿನಿಗೆ ತೆಗೆದುಕೊಂಡು ಬರುವುದೇ ನಮ್ಮ ಗುರಿ ಎಂದು ಹೇಳಿದರು. ಒಟ್ಟಾರೆ ಶತಮಾನಗಳಿಂದ ಅರಣ್ಯದಲ್ಲಿ ವಾಸ ಮಾಡುತ್ತಿದ್ದ ತಳೆವಾಡಿ ಗ್ರಾಮಸ್ಥರಿಗೆ ಅಂತೂ ಇಂತೂ ಪರಿಹಾರ ಸಿಕ್ತು.

ವರದಿ: ಶ್ರೀ ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!