Ad imageAd image

ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲಿರುವ ಬಿಗ್ ಹಿಟ್ಟರ್  ಡೆವಾಲ್ಡ್ ಬ್ರೇವಿಸ್

Bharath Vaibhav
ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲಿರುವ ಬಿಗ್ ಹಿಟ್ಟರ್  ಡೆವಾಲ್ಡ್ ಬ್ರೇವಿಸ್
WhatsApp Group Join Now
Telegram Group Join Now

ಐಪಿಎಲ್​ನ 18ನೇ ಆವೃತ್ತಿ ರಣ ರೋಚಕತೆಯಿಂದ ಸಾಗುತ್ತಿದೆ. ಎಲ್ಲಾ ಹತ್ತು ತಂಡಗಳು ಟ್ರೋಫಿಗಾಗಿ ಭರ್ಜರಿ ಹೋರಾಟ ನಡೆಸಿವೆ. ಈಗಾಗಲೇ ಟೂರ್ನಿಯ 34 ಪಂದ್ಯಗಳು ಮುಕ್ತಾಯಗೊಂಡಿದ್ದು, ಕೆಲ ತಂಡಗಳು ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಟಾಪ್​ 4ರಲ್ಲಿ ಸ್ಥಾನ ಪಡೆದಿದ್ದರೆ ಮತ್ತೆ ಕೆಲ ತಂಡಗಳು ಕಳಪೆ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿವೆ.

ಅದರಲ್ಲೂ ಐದು ಬಾರಿಯ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್​ ಮತ್ತು ಸಿಎಸ್​ಕೆ ತಂಡ ಈ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿವೆ. ಚೆನ್ನೈ ತಂಡ 7 ಪಂದ್ಯಗಳಲ್ಲಿ ಐದರಲ್ಲಿ ಸೋಲನ್ನು ಕಂಡಿದ್ದು 2ರಲ್ಲಿ ಮಾತ್ರ ಗೆಲುವು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲೂ ಕೊನೆಯ ಸ್ಥಾನಕ್ಕೆ ತಲುಪಿದೆ.

ತಂಡದಲ್ಲಿ ಯಾವುದೇ ಬ್ಯಾಟರ್​ಗಳು ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಇದರಿಂದಾಗಿ ತಂಡ ಸೋಲಿನ ಸುಳಿಗೆ ಸಿಲುಕಿ ನಲಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ತಂಡಕ್ಕೆ ಇದೀಗ ಯುವ ಸ್ಪೋಟಕ ಹಿಟ್ಟರ್​ ಎಂಟ್ರಿ ಕೊಟ್ಟಿದ್ದು ತಂಡಕ್ಕೆ ಆನೆಬಲ ಬಂದಂತಾಗಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ‘ಬೇಬಿ ಎಬಿ’ ಎಂದೇ ಕರೆಯಲ್ಪಡುವ ವಿಧ್ವಂಸಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರು ತಂಡ ಸೇರಿಕೊಂಡಿದ್ದಾರೆ.

ಅಭ್ಯಾಸದ ವೇಳೆ ಗಾಯಗೊಂಡ ಗುರ್ಜಪ್ನೀತ್ ಸಿಂಗ್ ಬದಲಿಗೆ 21 ವರ್ಷದ ಬ್ರೆವಿಸ್ ಅವರನ್ನು ₹2.20 ಕೋಟಿ ರೂ.ಗೆ ತಂಡಕ್ಕೆ ಕರೆ ತಂದಿರುವುದಾಗಿ ಸಿಎಸ್‌ಕೆ ಶುಕ್ರವಾರ ಪ್ರಕಟಿಸಿದೆ. ಈ ಋತುವಿನಲ್ಲಿ ಚೆನ್ನೈ ಆಡಲಿರುವ ಉಳಿದ ಪಂದ್ಯಗಳಿಗೆ ಬ್ರೆವಿಸ್ ಲಭ್ಯವಿರುತ್ತಾರೆ ಎಂದು ತಿಳಿಸಿದೆ. ಬ್ರೆವಿಸ್ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ 10 ಪಂದ್ಯಗಳನ್ನು ಆಡಿದ್ದರು.

ಬ್ರೆವಿಸ್ದಾಖಲೆಈವರೆಗೂ 81 ಟಿ20 ಪಂದ್ಯಗಳನ್ನು ಆಡಿರುವ ಬ್ರೆವಿಸ್​ 76 ಇನ್ನಿಂಗ್ಸ್​ಗಳಲ್ಲಿ 1787 ರನ್​ ಬಾರಿಸಿದ್ದಾರೆ. ಇದರಲ್ಲಿ 1 ಶತಕ 7 ಅರ್ಧಶತಕ ಸೇರಿವೆ. 162 ಇವರ್​ ಹೈಸ್ಕೋರ್​ ಆಗಿದೆ. ಬೌಲಿಂಗ್​ನಲ್ಲಿ 81 ಪಂದ್ಯಗಳಲ್ಲಿ 24 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್​ ಮಾಡಿರುವ ಅವರು 18 ವಿಕೆಟ್​ಗಳನ್ನು ಪಡೆದಿದ್ದಾರೆ. 19 ರನ್​ಗೆ 2 ವಿಕೆಟ್​ ಪಡೆದಿದ್ದ ಇವರ ಬೆಸ್ಟ್​ ಬೌಲಿಂಗ್​ ದಾಖಲೆ ಆಗಿದೆ.

WhatsApp Group Join Now
Telegram Group Join Now
Share This Article
error: Content is protected !!