ಬೆಂಗಳೂರು : ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರು ಅಂಕಿತ ಬಿದ್ದಿದೆ. ರಾಜ್ಯದಲ್ಲಿ ಹೆಚ್ಚಾಗಿದ್ದ ಮೈಕ್ರೋ ಫೈನಾನ್ಸ್ ಹಳಲಿಗೆ ಬ್ರೇಕ್ ಹಾಕುವ ಸಲುವಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಸುಗ್ರೀವಾಜ್ಞೆಗೆ ಅಂತಿಮವಾಗಿ ರಾಜ್ಯಪಾಲರು ಸಹಿ ಹಾಕಿದ್ದಾರೆ.ಆ ಮೂಲಕ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರದ ಸುಗ್ರೀವಜ್ಞೆ ಅಸ್ತ್ರ ಪ್ರಯೋಗ ಯಶಸ್ವಿಯಾಗಿದೆ.
ಮೈಕ್ರೋ ಫೈನಾನ್ಸ್ ಆಟಾಟೋಪಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸುಗ್ರೀವಜ್ಞೆ ಹೊರಡಿಸಿದ ನಂತರ ಯಾವುದೇ ಕಾನೂನಾತ್ಮಕ ತೊಡಕುಗಳು ಉಂಟಾಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ಸಮಯ ಪಡೆದುಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನತಿಯಂತೆ ಅಳೆದು ತೂಗಿ, ಕಾನೂನು ಪಂಡಿತರ ಪರಾಮರ್ಷೆಗೆಒಳಪಡಿಸಿ ಈ ಕರಡು ಸಿದ್ಧಪಡಿಸಲಾಗಿತ್ತು.
ಆದ್ರೆ ಮೊದಲ ಬಾರಿ ಈ ಕರಡನ್ನು ರಾಜ್ಯಪಾಲರ ಸಹಿಗೆ ಕಳುಹಿಸಿದಾಗ, ಈ ಬಿಲ್ ನಲ್ಲಿ ಸಾಲ ನೀಡಿದವರಿಗೆ ಯಾವುದೇ ರಕ್ಷಣೆ ಕಂಡುಬರುತ್ತಿಲ್ಲ ಎಂಬ ಅಂಶವನ್ನು ಮನಗಂಡ ರಾಜ್ಯಪಾಲರು, ಕೆಲವು ಕಾರಣಗಳನ್ನು ನೀಡಿ ಸಹಿ ಹಾಕಲು ನಿರಾಕರಿಸಿ ಹಿಂತಿರುಗಿಸಿದ್ದರು.
ಆ ಎಲ್ಲಾ ಲೋಪದೋಷಗಳನ್ನು ಸರಿ ಪಡಿಸಿದ ನಂತರ ಮತ್ತೊಮೆ ರಾಜ್ಯಪಾಲರ ಅಂಗಳಕ್ಕೆ ಸುಗ್ರೀವಜ್ಞೆ ಆದೇಶದ ಪ್ರತಿಯನ್ನು ಕಳುಹಿಸಲಾಗಿತ್ತು. ಅಂತಿಮವಾಗಿ ಇಂದು ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅಸ್ತು ಎಂದಿದ್ದಾರೆ.