Ad imageAd image

ಬಿಹಾರ ಸಿಡಿಲಾಘಾತ: ಅಧಿಕೃತ 25 ಮಂದಿ ಸಾವು: ವಿವಿಧ ಜಿಲ್ಲೆಯಲ್ಲಿ 63 ಮಂದಿ ಸಾವು?

Bharath Vaibhav
ಬಿಹಾರ ಸಿಡಿಲಾಘಾತ: ಅಧಿಕೃತ 25 ಮಂದಿ ಸಾವು: ವಿವಿಧ ಜಿಲ್ಲೆಯಲ್ಲಿ 63 ಮಂದಿ ಸಾವು?
WhatsApp Group Join Now
Telegram Group Join Now

ಬಿಹಾರ: ಸಿಡಿಲಿನ ಹೊಡೆತಕ್ಕೆ ಬಿಹಾರದಲ್ಲಿ ಕಳೆದ 48 ಗಂಟೆಗಳಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಮಳೆ, ಮಿಂಚಿನಿಂದ ರಾಜ್ಯ ವಿವಿಧ ಜಿಲ್ಲೆಯಲ್ಲಿ 63 ಮಂದಿ ಸಾವನ್ನಪ್ಪಿದ್ದು, ಸರ್ಕಾರದಿಂದ ಅಧಿಕೃತವಾಗಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. ಅದರಲ್ಲೂ ನಳಂದ ಜಿಲ್ಲೆಯಲ್ಲಿಯೇ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ದತ್ತಾಂಶ ತಿಳಿಸಿದೆ.

ನಳಂದದಲ್ಲಿ ಅಧಿಕ ಸಾವುದತ್ತಾಂಶದ ಪ್ರಕಾರ, ಮಿಂಚು, ಮಳೆ ಸಂಬಂಧಿತ ಬಹುತೇಕ ಸಾವುಗಳು ಬಿಹಾರದಲ್ಲಿ ವರದಿಯಾಗಿದೆ. 22 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಬಿಹಾರಶರೀಫ್​​ನ ನಗ್ಮಾದಲ್ಲಿ 6, ದರ್ಭಾಂಗದಲ್ಲಿ 6, ಬೇಗುಸರಾಯ್​ನಲ್ಲಿ 5, ಮಧುಬನಿಯಲ್ಲಿ 4, ಜಮುಯಿ 3 ಮಂದಿ, ಸಮಸ್ತಿಪುರದಲ್ಲಿ 2, ಸಹರ್ಸಾದಲ್ಲಿ 4, ಔರಂಗಾಬಾದ್‌ನಲ್ಲಿ 2, ಪಾಟ್ನಾದಲ್ಲಿ 3, ಅರಾರಿಯಾದಲ್ಲಿ 1, ಗಯಾದಲ್ಲಿ 3, ಭೋಜ್‌ಪುರದಲ್ಲಿ 5, ಜೆಹಾನಾಬಾದ್, ಅರ್ವಾಲ್, ಮುಜಫರ್ ಪುರ್ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಪರಿಹಾರ ಘೋಷಿಸಿದ ಸಿಎಂ: ಸಿಡಿಲಿನಿಂದ ಹೆಚ್ಚಿನ ಸಾವು ಸಂಭವಿಸಿರುವ ಕುರಿತು ಸಂತಾಪ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂತ್ರಸ್ತ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದು, ತಕ್ಷಣ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸೂಚಿಸಿದ್ದಾರೆ.

ಸಿಡಿಲಿನಿಂದ ಸಾವನ್ನಪ್ಪಿದವರ ಅಂಕಿ ಅಂಶ: ಸರ್ಕಾರಿ ಅಂಕಿಅಂಶಗಳ ಪ್ರಕಾರ (ಬಿಹಾರ ವಿಪತ್ತು ನಿರ್ವಹಣೆ), 2019-20ರಲ್ಲಿ 253 ಜನರು ಸಾವನ್ನಪ್ಪಿದ್ದು, 48 ಜನರು ಗಾಯಗೊಂಡಿದ್ದಾರೆ. 2020-21ರಲ್ಲಿ 459 ಜನರು ಸಾವನ್ನಪ್ಪಿದ್ದು, 68 ಜನರು ಗಾಯಗೊಂಡಿದ್ದಾರೆ. 2021-22ರಲ್ಲಿ 280 ಜನರು ಸಾವನ್ನಪ್ಪಿದ್ದು, 56 ಜನರು ಗಾಯಗೊಂಡಿದ್ದಾರೆ. 2022-23ರಲ್ಲಿ 400 ಜನರು ಸಾವನ್ನಪ್ಪಿದ್ದು, 77 ಜನರು ಗಾಯಗೊಂಡಿದ್ದಾರೆ. 2023-24ರಲ್ಲಿ 242 ಜನರು ಸಾವನ್ನಪ್ಪಿದ್ದು, 37 ಜನರು ಗಾಯಗೊಂಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ಸರ್ಕಾರಿ ಅಂಕಿಅಂಶಗಳ ಪ್ರಕಾರ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬಿಹಾರದಲ್ಲಿ ಅಧಿಕ ಸಾವು: ಬಿಹಾರದ ವಿಪತ್ತು ನಿರ್ವಹಣಾ ಇಲಾಖೆಯ ವರದಿಯ ಪ್ರಕಾರ, ಬಿಹಾರದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ 2.65 ಜನರು ಸಿಡಿಲಿನಿಂದ ಸಾವನ್ನಪ್ಪುತ್ತಿದ್ದಾರೆ ಈ ಅಂಕಿ ಅಂಶವು ರಾಷ್ಟ್ರೀಯ ಸರಾಸರಿ 2.55 ಸಾವುಗಳಿಗಿಂತ ಹೆಚ್ಚಾಗಿದೆ. ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಹೆಚ್ಚಿನ ಮಿಂಚಿನ ಘಟನೆಗಳು ಬಿಹಾರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಕಂಡುಬರುತ್ತವೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಮಿಂಚಿನಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ.

WhatsApp Group Join Now
Telegram Group Join Now
Share This Article
error: Content is protected !!