ಹೊಸಳ್ಳಿ ಕ್ರಾಸ್ ಯಿಂದ ಕಾಳಗಿ ತಾಲೂಕದವರೆಗೆ ಯೂತ್ ಟೀಮ್ ವತಿಯಿಂದ ಹಮ್ಮಿಕೊಂಡ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ ಮಾಡಲಾಯಿತು, ಇದೆ ವೇಳೆ ಈ ಅಭಿಯಾನಕ್ಕೆ ದೇವೀಂದ್ರಪ್ಪ ಎ ಎಸ್ ಐ ರಟಕಲ್ ಅವರು ಚಾಲನೆ ನಿಡಿದರು, ಕಾಳಗಿ ಪ್ರಮುಖ ಬೀದಿಯಲ್ಲಿ ನಶಾ ಮುಕ್ತ ಅಭಿಯಾನದ ಕುರಿತು ಜಾಗೃತಿ ಘೋಷಣೆಗಳು ಕೂಗುತ್ತಾ ಜನಮನ ಸೆಳೆದರು, ಇದೆ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬಂದು ಯುವಕರಿಂದ ಪ್ರತಿಜ್ಞೆ ಮಾಡಲಾಯಿತು, ಹಾಗೂ ರಾಜು ಬುಳ್ಳ ಹಾಗೂ ಗುರುನಂದೇಶ್ ಕೋಣಿನ್ ಅವರು ಯುವಕರಿಗೆ ಮನ ಮುಟ್ಟುವಂತೆ ಉತ್ಸವ ಭರಿತ ಮಾತನಾಡಿದರು, ಎ ಎಸ್ ಐ ಕಾಳಗಿ ಅವರು ಈ ಅಭಿಯಾನದ ಕುರಿತು ತಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಜುಕುಮಾರ್ ರಾಣಾಪೂರ್, ಹಣಮಂತ ಕುಡಹಳ್ಳಿ, ಗಣಪತಿ ಸುಂಟಾನ , ರಮೇಶ್ ಮಡಿವಾಳ, ಸುರೇಶ ಮಂದಲಿ, ಮಹೇಶ್ ದೇವನ, ಪ್ರಕಾಶ್ ಕೊರವಿ, ರಾಮಚಂದ್ರ ಹೊಸಳ್ಳಿ, ಸಿದ್ರಾಮ್ ಹಲಚೇರಾ, ಅಂಬರೀಷ್ ಹಲಚೇರಾ, ಮಹೇಶ್ ಹಲಚೇರಾ, ಖತಲಪ್ಪ ವಜೀರಾಗಾಂವ, ಹೀಗೆ ಕುಡಹಳ್ಳಿ, ಹೊಸಳ್ಳಿ, ವಜೀರಾಗಾಂವ,ಹಲಚೇರಾ, ಕೊರವಿ ಸುಂಟಾನ, ಗ್ರಾಮದ ಯುವಕರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ: ಹಣಮಂತ ಕುಡಹಳ್ಳಿ




