ಯಳಂದೂರು : ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗಿಗಳು ಸಂಘದ ರಾಜ್ಯಾಧ್ಯಕ್ಷರಾದ ಕೂಡ್ಲೂರು ಶ್ರೀಧರ್ಮೂರ್ತಿ ರವರ ನೇತೃತ್ವದಲ್ಲಿ ಯಳಂದೂರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುವ ವಿವಿಧ ಸಮುದಾಯದ ವ್ಯಕ್ತಿಗಳ ಸ್ಮಾರಣರ್ಥಕವಾಗಿ ವಾಲಿಬಾಲ್ ಅಥವಾ ಕಬಡ್ಡಿ ಪಂದ್ಯಾವಳಿಯನ್ನು ನಡೆಸಲು ಯಳಂದೂರು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಬೈಕ್ ರಾಲಿಯ ಮುಖಾಂತರ ತಾಲೂಕಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳ ಹೆಸರನ್ನು ಕಲೆ ಹಾಕಲು ಎಂದರು ಪಟ್ಟಣದ ಹೃದಯ ಭಾಗವಾಗಿರುವ ಅಂಬೇಡ್ಕರ್ ಸಮುದಾಯ ಭಾವನದಿಂದ ಚಾಲನೆ ನೀಡಲಾಯಿತು
ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗಿ ಸಂಘದ ರಾಜ್ಯಾಧ್ಯಕ್ಷರಾದ ಕೂಡ್ಲೂರು ಶ್ರೀಧರ್ ಮೂರ್ತಿ ಮಾತನಾಡಿ ಸಮಾನ ಮನಸ್ಸಕರ ವೇದಿಕೆ ಮಾಡಿಕೊಂಡು ಅದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗಿಗಳ ಸಂಘ(ರಿ ) ಬೆಂಗಳೂರು ಇವರ ಸಂಯುಕ್ತ ಆಶ್ರಯದೊಂದಿಗೆ ಕರ್ನಾಟಕ ರಾಜ್ಯದ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಅಥವಾ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಯಾವುದಾದರೂ ಒಂದು ಆಟವನ್ನು ಆಡಿಸಲು ಎಲ್ಲರ ನಿರ್ಧಾರವನ್ನು ತೆಗೆದುಕೊಳ್ಳಲು ಸಮಾಲೋಚನಾ ಸಭೆಯನ್ನು ಕರೆದು ಚರ್ಚಿಸಲುವಾಗಿ ಹಾಗೂ ತಾಲೂಕು ಅಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಗಳ ಹೆಸರುಗಳನ್ನು ಆಯ್ಕೆ ಮಾಡಲು 10-01-2025 ರಂದು ಬೆಳಗ್ಗೆ 11ಗಂಟೆಗೆ ಸರಿಯಾಗಿ ಯಳಂದೂರಿನ ಷಡಕ್ಷರಿ ದೇವಸ್ಥಾನದ ಮುಂಭಾಗ ಎಲ್ಲಾ ಗ್ರಾಮಸ್ಥರು ಮುಖಂಡರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳೊಂದಿಗೆ ಈ ಸಭೆಯನ್ನ ಯಶಸ್ಸಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಹದೇವ್ ಗುಂಬಳ್ಳಿ,ಮದ್ದೂರು ಚಕ್ರವರ್ತಿ, ಪುಟ್ಟ ಮಾದಯ್ಯ, ಚಂದ್ರಶೇಖರ್, ನಂಜುಂಡಸ್ವಾಮಿ,ಡಾಕ್ಟರ್ ದೊಡ್ಡರಾಜು, ಶ್ರೀನಿವಾಸ್ ಅಗರ, ಸಿದ್ದರಾಜು ಶಶಿಧರ್ ಮಲ್ಲಯ್ಯ, ಮಲ್ಗಳ್ಳಿ ಗುರುಸಿದ್ದಯ್ಯ, ಮಲ್ಲು ಮಾಂಬಳ್ಳಿ, ಎಚ್ಎನ್ ಬಸವಣ್ಣ ಹೊನ್ನೂರು, ರಾಚಣ್ಣ ಯರಿಯೂರು, ಗೋವಿಂದ ಹಿರಿಯೂರು, ಸಿದ್ದರಾಜು ಹಾಗೂ ಮುಖಂಡರುಗಳ ಹಾಜರಿದ್ದರು,
ವರದಿ :ಸ್ವಾಮಿ ಬಳೇಪೇಟೆ