ಬೆಂಗಳೂರು : ಮುಂದಿನ 6 ವಾರಗಳಲ್ಲಿ ರ‍್ಯಾಪಿಡೋ ಸೇರಿದಂತೆ ಇತರ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸರ್ಕಾರಿ ಮೋಟಾರು ವಾಹನ ಕಾಯ್ದೆ, 1988 ಸೆಕ್ಷನ್ 3ರಡಿ ಮಾರ್ಗಸೂಚಿಗಳನ್ನು ರೂಪಿಸಬೇಕು, ಅಲ್ಲಿಯವರೆಗೆ ಬೈಕ್ ಟ್ಯಾಕ್ಸಿಗಳು ತಮ್ಮ ಕಾರ್ಯನಿರ್ವಹಿಸುವಮತಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ರಾಜ್ಯದ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದಿನ ಆರು ವಾರಗಳ ಒಳಗೆ ನಿರ್ಬಂಧಿಸಬೇಕು ಎಂದು ಕೋರ್ಟ್ ಹೇಳಿದ್ದು, ರ‍್ಯಾಪಿಡೋ, ಊಬರ್, ಓಲಾ ಸೇರಿದಂತೆ ಇತರೆ ಎಲ್ಲಾ ಬೈಕ್ ಟ್ಯಾಕ್ಸಿಗಳ ಸೇವೆ ನಿಲ್ಲಿಸಲಾಗುತ್ತದೆ. 3 ತಿಂಗಳ ಒಳಗಾಗಿ ಮಾರ್ಗಸೂಚಿ ಹೊರಡಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಕೋರ್ಟ್ ಆದೇಶದಿಂದ ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ದೊಡ್ಡ ಹಿನ್ನಡೆ ಸಾಧ್ಯತೆ ಇದ್ದು, ಸರ್ಕಾರವು ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 3 ರ ಅಡಿಯಲ್ಲಿ ಸಂಬಂಧಿತ ಮಾರ್ಗಸೂಚಿಗಳನ್ನು ಹೊರಡಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಕಾರ್ಯನಿರ್ವಹಿಸುವಂತಿಲ್ಲ. ಆರು ವಾರಗಳ ಒಳಗೆ ಅಂತಹ ಎಲ್ಲಾ ಸೇವೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳುವಂತೆ ನ್ಯಾಯಾಲಯ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.