Ad imageAd image

ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ಜಾತ್ರೆ ರಥೋತ್ಸವ ತುಂಬಿದ ಜನ ಸಾಗರ

Bharath Vaibhav
ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ಜಾತ್ರೆ ರಥೋತ್ಸವ ತುಂಬಿದ ಜನ ಸಾಗರ
WhatsApp Group Join Now
Telegram Group Join Now

 

ಚಾಮರಾಜನಗರ  :-ಇತಿಹಾಸ ದ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದಲ್ಲಿ ವಿಜೃಂಭಣೆ ಯಿಂದ ನಡೆದ ದೊಡ್ಡ ರಥೋತ್ಸವ….

ರಥೋತ್ಸವಕ್ಕೆ ಉಪವಿಬಾಗಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ನಿಸರ್ಗ ಪ್ರಿಯ ರವರು ಚಾಲನೆ ನೀಡಿದರು…

ಗರುಡ ಪಕ್ಷಿ ಆಗಮನದ ನಂತರ ಲಕ್ಷಾಂತರ ಜನರು ರಥೋತ್ಸವವನ್ನು ಕಣ್ತುಂಬಿಕೊಂಡರು,ದಂಪತಿಗಳು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು….

ಶಂಖ, ಜಾಗಟೆ, ವಾದ್ಯ ಘೋಷಗಳ ನಡುವೆ,ತೇರನ್ನು ಎಳೆಯಲಾಯಿತು, ಸಾವಿರಾರು ಭಕ್ತರು ಉದ್ಯೋಗಿ ರಂಗಪ್ಪ ಎಂದು ಕೂಗುತ್ತಾ ಬೇಟೆ ಮನೆಸೇವೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು…

ಭಾರಿ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು
ಬೆಟ್ಟದಲ್ಲಿ ಪ್ರತಿ ವರ್ಷ ಮೂರು ತೇರಿನ ಉತ್ಸವ ನಡೆಯುತ್ತದೆ.

ಹೂ, ಬಾಳೆ, ಹೊಂಬಾಳೆ, ಕಬ್ಬು, ತಳಿರು ತೋರಣಗಳಿಂದ ಸಿಂಗರಿಸುವ ಜವಾಬ್ದಾರಿಯನ್ನು ಸೋಲಿಗರು ನಡೆಸಿದ್ದರು.ನಾಯಕ ಜನಾಂಗದವರು ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ರಥ ಸಾಗುವ ಮಾರ್ಗದ ಜವಾಬ್ದಾರಿ ವಹಿಸಿಕೊಂಡಿದ್ದರು. ಹೀಗೆ, ನೂರಾರು ಕರ ಸೇವಕರ ಶ್ರಮದ ನಡುವೆ ಬ್ರಹ್ಮ ರಥೋತ್ಸವದ ವೈಭವ ರಾರಾಜಿಸಿತು,ಒಟ್ಟಾರೆಯಾಗಿ ಈ ಬಾರಿ ನಡೆದ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವನ್ನು ವಿಜೃಂಭಣೆಯಿಂದ ನಡೆಸಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು.

 

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!