ಹುಕ್ಕೇರಿ:-ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕೈ ಮಗ್ಗ ಮತ್ತು ಜವಳಿ ಇಲಾಖೆಯಿಂದ ನಿರ್ಮಿಸಿದ ಕಾರ್ಯಾಗಾರ 2005-06 ಶ್ರೀ ಬೀರೇಶ್ವರ ಗ್ರಾಮೋದ್ಯೋಗ ಸಂಘ, ಸಿರಿಯಲ ನಂಬರ್ 35/79-80 ರ ನ್ಯಾಯ ಬೆಲೆ ಅಂಗಡಿ 2832,-9 ಸಂಖ್ಯೆಯ ನ್ಯಾಯ ಬೆಲೆ ಅಂಗಡಿವರು ಮತ್ತೆ ಅಕ್ಕಿ ಕಳ್ಳತನ ಹೇಳಿ ಕೇಳಿ ಮಾಡುತ್ತಿದ್ದಾರೆ.
ಪಡಿತರ ಚೀಟಿ ದಾರರ್ ಕಣ್ಣು ಮುಂದೆಯೇ ಮೆಷಿನ್ ಗಳಲ್ಲಿ ವ್ಯತ್ಯಾಸ ಮಾಡಿ 1 kg ಯಿಂದ 1 ವರೆ kg ಹಾಗೂ ಅರ್ಧ ಕೆಜಿ , ಪಾವ್ ಕೆಜಿ ಅಕ್ಕಿಯನ್ನು ಕಾಟಾದಲ್ಲಿ ಹೊಡೆಯುತ್ತಿರುವ ಈ ನ್ಯಾಯಬೆಲೆ ಅಂಗಡಿಯವರು ಒಂದು ಕೆಜಿ ಅಕ್ಕಿ ಕಡಿಮೆ ಕೊಡುವುದಲ್ಲದೆ.
ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಅಲ್ಲದೆ ಈ ಕಳ್ಳತನ ಬಗ್ಗೆ ಮಾಹಿತಿ ಕೇಳಲು ಹೋದಂತ ಪತ್ರಕರ್ತರ ಮೇಲೆ ದಬ್ಬಾಳಿಕೆ ಮಾಡುವುದು ರಾಜಕೀಯ ವ್ಯಕ್ತಿಗಳಿಂದ ಪೋನ್ ನಲ್ಲಿ ಮಾತಾಡಿಸಿ ಹೆದರಿಸುವುದು ಈ ನ್ಯಾಯಬೆಲೆ ಅಂಗಡಿಯವರು ಮಾಡುತ್ತಾರೆ.
ಅಲ್ಲದೆ ಈ ನ್ಯಾಯಬೆಲೆ ಅಂಗಡಿಯಿಂದ ಅಧಿಕಾರಿಗಳಿಗೆ ಅಕ್ಕಿ ಕಡಿಮೆ ಬರುತ್ತೆ ಎಂದು ತಕರಾರು ಕೊಟ್ಟರು ಸಹ ಅಧಿಕಾರಿಗಳು ಹಾಗೇ ಕೊಡಿ ಎಂದು ಹೇಳಿದ್ದಾರೆಂದು ಆವಾಜ್ ಮಾಡಿ ಹೆದರಿಸುತ್ತಾನೆ.ಹೇಗೆ ಜನರಿಗೆ ಮೋಸ ಮಾಡುವುದೇ ಇವರ ಉದ್ದೇಶ ಪೂರ್ವಕ ಕೆಲಸ ಆಗಿದೆ ಏನೋ ಅನಿಸುತ್ತಿದೆ ಈಗಲಾದರೂ ಸಂಭಂದ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ನೋಡೋಣ.ಜನರಿಗೆ ನ್ಯಾಯ ಕೊಡಿ ಸರ್ ಅನ್ಯಾಯ ಮಾಡಬೇಡಿ ಬಡವರ ಹೊಟ್ಟೆ ಮೇಲೆ ಹೋಡಿಯಬೇಡಿ ಸಾಹೇಬ್ರೆ.
ವರದಿ :-ರಾಜು ಮುಂಡೆ