ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ಪಕ್ಷದಿಂದ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ದೇಶಕಂಡ ಸರಳ ಸಜ್ಜನಿಕೆ ವ್ಯಕ್ತಿ ಹಾಗೂ ಭಾರತ ರತ್ನ ಮಾಜಿ ಪ್ರಧಾನಿಯಾಗಿರುವ ವಾಜಪೇಯಿ ಅವರು ಸ್ವಾತ್ಯಂತ್ರ ನಂತರದ ಕಾಂಗ್ರೇಸ್ ಪಕ್ಷದ ನೀತಿಗಳನ್ನು ವಿರೋಧಿಸುವ ಮೂಲಕ ಸ್ವದೇಶಿ ವಸ್ತುಗಳಿಗೆ ಪ್ರಾಧ್ಯನತೆಯನ್ನು ನೀಡಿದವರಾಗಿದ್ದಾರೆ.
ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿದ್ದು, ಕಾರ್ಯಕರ್ತರೊಂದಿಗೆ ಸ್ನೇಹವನ್ನು ಹೊಂದಿದ್ದರು. ಭವಿಷ್ಯ ಭಾರತದ ಅಭ್ಯುದಯಕ್ಕೆ ಹಲವಾರು ಯೋಜನೆಗಳನ್ನು ಹಾಕುವುದರೊಂದಿಗೆ ಅಭಿವೃದ್ದಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆಂದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ನಾಯ್ಡು, ತಾಲೂಕಾಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಎಮ್.ಎಸ್.ಸಿದ್ದಪ್ಪ, ಮುಖಂಡರಾದ ಟಿ.ಧರಪ್ಪನಾಯಕ, ನಾಗೇಶಪ್ಪ, ಮೇಕೇಲಿ ವೀರೇಶ, ವಿಕ್ರಮ್ ಜೈನ್, ಶೇಖರ ಗೌಡ, ವೈ.ಡಿ.ವೆಂಕಟೇಶ, ಶಿವರೆಡ್ಡಿ, ರಾಘವೇಂದ್ರ, ವಿ.ನಟರಾಜ್ ಸೇರಿದಂತೆ ಇನ್ನಿತರರಿದ್ದರು.




