ಹುಬ್ಬಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಅಧ್ಯಕ್ಷರು ಹಾಗೂ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಹುಟ್ಟು ಹಬ್ಬದ ದಿನಾಚರಣೆಯ ಅಂಗವಾಗಿ ಜೋಯಿಡಾ ತಾಲೂಕು ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಜೋಯಿಡಾ ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ: ವಿಜಯ್ ಕುಮಾರ್ ಕೊಚ್ಚರಗಿ ದಾಂಡೇಲಿ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಭೋಜ ಒಕ್ಕೂಟ ಉಪಾಧ್ಯಕ್ಷ ಸಾಗರ ನಾಯಕ್ ಹಾಗೂ ಶಾಂತಾ ಹರಿಜನ್ ಅಕ್ಷತಾ ಮಂಡಲ್ಕರ್ ಲಕ್ಷ್ಮಿ ಹರಿಜನ್ ಹಾಗೂ ಜೋಯಿಡಾ ವಲಯದ ಮೇಲ್ವಿಚಾರಕರಾದ ಪ್ರವೀಣ ತಿಮ್ಮಣ್ಣವರ್. ದೇವಾನಂದ್ ಮೀರಾಶಿ ಹಾಗೂ ಸೇವಾ ಪ್ರತಿನಿಧಿ ದ್ರಾಕ್ಷಾಯಿಣಿ ನಾಯಕ್ ಹಾಗೂ ಇತರ ಸಂಘದ ಸದಸ್ಯರು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.





