ಚಿಕ್ಕೋಡಿ: ಪಟ್ಟಣದಲ್ಲಿ ಪಹಲ್ಗಾಮ್ ದಲ್ಲಿ ಉಗ್ರರ ನಡೆಸಿದ ದಾಳಿ ಖಂಡಿಸಿ ಬೃಹತ್ ಮೊಂಬತ್ತಿ ಮೆರವಣಿಗೆ ಜರುಗಿತು. ಚಿಕ್ಕೋಡಿ ಪಟ್ಟಣದ ಆರ್.ಡಿ.ಕಾಲೇಜ್ ಮೈದಾನದಿಂದ ಹೊರಟ ಭವ್ಯ ಮೆರವಣಿಗೆ ಕೆಸಿ ರಸ್ತೆಯ ಯಶವಂತ ಚಿತ್ರಮಂದಿರ ಬಳಿ ಗಾಂಧಿ ಕಟ್ಟೆಯ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಪಾದನಾ ಸ್ವಾಮೀಜಿ, ಮಾಜಿ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ , ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಆರ್ಎಸ್ಎಸ್ ಮುಖಂಡ ಸಂಜಯ ಅಡಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಂಡಳ ಅಧ್ಯಕ್ಷರು ಪವನ ಮಹಾಜನ ಸಂಜಯ್ ಪಾಟೀಲ್ ಲಕ್ಷ್ಮಿಕಾಂತ್ ಹಾಲಪ್ಪನವರ ಅಮೃತ್ ಕುಲಕರ್ಣಿ ಅಪ್ಪಾಸಾಹೇಬ ಚೌಗಲಾ, ವರ್ಧಮಾನ ಸದಲಗೆ, ಎಂ.ಎ.ಪಾಟೀಲ, ಸಂಜಯ ಕವಟಗಿಮಠ, ಮಲ್ಲಿಕಾರ್ಜುನ ಕವಟಗಿಮಠ, ಪ್ರವೀಣ ಕಾಂಬಳೆ, ಬಾಬು మిರ್ಜೆ, ಚಂದ್ರಶೇಖರ ಅರಭಾಂವಿ, ಕೈಲಾಶ ಮಾಳಗೆ. ಡಾ.ಸುರೇಶ ಉಕ್ಕಲಿ, ದರ್ಶನ ಪೂಜಾರಿ ಸಾಗರ್ ಬಿಸ್ಕೋಪ್ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ