ಬೆಂಗಳೂರು: ಸಿ.ಟಿ. ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆಳಗಾವಿ ಚಲೋ ಹೋರಾಟಕ್ಕೆ ಮುಂದಾಗಿದೆ. ಆದರೆ ಬೆಳಗಾವಿ ಚಲೋಗೆ ಅನುಮತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಿಜೆಪಿಯವರ ಬೆಳಗಾವಿ ಚಲೋಗೆ ಪರ್ಮಿಷನ್ ಕೊಡಲ್ಲ. ಅದಕ್ಕೂ ಮೀರಿ ಅವರು ಮಾಡಿದರೆ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ನಾವು ಕಾನೂನು ವ್ಯವಸ್ಥೆ ಸರಿ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಕಲಾಪದ ವೇಳೆ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ, ವಿಡಿಯೋ ಪರಿಶೀಲಿಸಿ, ಎಫ್ ಎಸ್ ಎಲ್ ಗೆ ಕಳುಹಿಸುವ ಬಗ್ಗೆ ಪರಿಶೀಲಿಸುತ್ತೇವೆ. ಸಭಾಪತಿಯವರು ಮಾಧ್ಯಮಗಳಲ್ಲಿ ಬಂದ ಬಗ್ಗೆ ಪರಿಸೀಲಿಸುತ್ತಾರೆ. ಪೊಲೀಸರು ನಿಯಮಗಳ ಪ್ರಕಾರವೇ ಕೆಲಸ ಮಾಡುತ್ತಾರೆ ಎಂದು ಬಿಜೆಪಿಗೆ ಕುಟುಕಿದ್ದರು.