Ad imageAd image

ವಿಜಯಶಾಲಿಯಾದ ಬಿಜೆಪಿಯ ಅಭ್ಯರ್ಥಿ

Bharath Vaibhav
ವಿಜಯಶಾಲಿಯಾದ ಬಿಜೆಪಿಯ ಅಭ್ಯರ್ಥಿ
WhatsApp Group Join Now
Telegram Group Join Now

————————————————-ನಿಡಗುಂದಿ ಪಟ್ಟಣ ಪಂಚಾಯತಿಯ 5 ವಾರ್ಡನ ಉಪಚುನಾವಣೆ

ನಿಡಗುಂದಿ: ನಿಡಗುಂದಿ ಪಟ್ಟಣ ಪಂಚಾಯತಿಯ ಐದನೇ ವಾರ್ಡ್ ಅಭ್ಯರ್ಥಿಯ ಅಕಾಲಿಕ ಮರಣದಿಂದ ಉಪಚುನಾವಣೆ ನಡೆಸಲಾಗಿತ್ತು. 5ನೇ ವಾರ್ಡಿನ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧಿಗಳಿದ್ದರು, ಬಹಳ ಪೈಪೋಟಿ ತುರುಸಿನ ಚುನಾವಣೆಯಲ್ಲಿ ಆರು(6) ಮತಗಳ ಅಂತರದಿಂದ ವಿಜಯದ ಚುಕ್ಕಾಣೆ ಹಿಡಿದ ಭಾರತೀಯ ಜನತಾ ಪಾರ್ಟಿಯ.

ನಿಡುಗುಂದಿ ಪಟ್ಟಣದ ಐದನೇ ವಾರ್ಡ್ ಬಿಜೆಪಿಯ ಭದ್ರಕೋಟೆ, ಮತ್ತೊಮ್ಮೆ ಬಿಜೆಪಿಯ ಅಭ್ಯರ್ಥಿಯಾಗಿ ಈರಣ್ಣ ಗೋನಾಳ, ಆಯ್ಕೆಯಾಗಿದ್ದಾರೆ. ಪಟಾಕಿ ಸಿಡಿಸಿ ಸಿಹಿ ಹಂಚುವದರ ಜೊತೆಗೆ ವಿಜಯೋತ್ಸವವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು ಶಾಸಕರಾದ ಎಸ್ ಕೆ ಬೆಳುಬ್ಬಿ ಅಭಿನಂದನೆಗಳನ್ನು ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ ತ್ರಿಕೋನ ಸ್ಪರ್ಧೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ, ಎಷ್ಟೇ ಶತಗತ ಪ್ರಯತ್ನ ಪಟ್ಟರು,
ಐದನೇ ವಾರ್ಡಿನ ಕೆಲವು ಮತದಾರರನ್ನು ಅದಲು ಬದಲು ಮಾಡಿದರೂ, ಹಣ ಬಲ ಅಧಿಕಾರದ ಬಲ ಇದ್ದರೂ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವಾಗಿಲ್ಲ.

ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಎರಡು ವರ್ಷದಲ್ಲಿ ವಿಫಲವಾಗಿದೆ, ಮಹಿಳೆಯರಿಗೆ ಹಿರಿಯ ನಾಗರಿಕರಿಗೆ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ ಸರಿಯಾಗಿ ಸಿಗುತ್ತಿಲ್ಲ, ನಾಡಿನ ಜನರು ಗ್ಯಾರಂಟಿ ಯೋಜನೆ ಬಗ್ಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿ ಸರಿಸುಮಾರು 150 ಅಭ್ಯರ್ಥಿಗಳಿಂದ ಆಯ್ಕೆಯಾಗಿ ಬಹುಮತ ಸಾಧಿಸಲಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಬಿಜೆಪಿಯ ನೂತನ ಅಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ, ಮಂಡಳ ಅಧ್ಯಕ್ಷರಾದ ಸಿದ್ದರಾಮಪ್ಪ ಕಾಕಂಡಕಿ, ಮಂಜುನಾಥ್,ಶಿವಾನಂದ ಅವಟಿ, ಬಾಬು ಮುಚ್ಚಂಡಿ, ಸಂಗಮೇಶ್ ಗೂಗಿಹಾಳ, ಪಟ್ಟಣ ಪಂಚಾಯಿತಿಯ ಬಿಜೆಪಿಯ ಸದಸ್ಯರು ಯುವ ಮುಖಂಡರು ಗುರು ಹಿರಿಯರು ಮಹಿಳೆಯರು ಸೇರಿದಂತೆ ಬಿಜೆಪಿಯ ಅಭಿಮಾನಿಗಳಿದ್ದರು.

ವರದಿ :ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!