Ad imageAd image

ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ಭರ್ಜರಿ ರೋಡ್ ಶೋ

Bharath Vaibhav
ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ಭರ್ಜರಿ ರೋಡ್ ಶೋ
WhatsApp Group Join Now
Telegram Group Join Now

ಚಾಮರಾಜನಗರ :-ಯಳಂದೂರು. ಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಎಸ್ ಬಾಲರಾಜು. ಮತಯಾಚನೆ ಮಾಡಿದರು.

ಬಿಜೆಪಿ ತಾಲ್ಲೂಕು ಮಂಡಲದ ಕಾರ್ಯಕರ್ತರು, ಮುಖಂಡರು ಜೊತೆಗೂಡಿ ಪಟ್ಟಣದ ನಾಡ ಮೇಗಲಮ್ಮ ದೇವಾಲಯದಿಂದ ಪ್ರಮುಖ ರಸ್ತೆಗಳ ಮೂಲಕ ಬೃಹತ್ ರೋಡ್ ಶೋ ನಡೆಸಿದರು.

ಪಟ್ಟಣದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಗೆ ಮಾಜಿ ಶಾಸಕ ಎನ್. ಮಹೇಶ ಹಾಗೂ ಅಭ್ಯರ್ಥಿ ಎಸ್ ಬಾಲರಾಜು, ಹಾಗೂ ಮುಖಂಡರು ಮಾಲಾರ್ಪಣೆ ಮಾಡಿದರು.

ಮತಯಾಚನೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮಾತನಾಡಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಅವರು ಹತ್ತು ವರ್ಷಗಳ ಕಾಲ ಉತ್ತಮ ಆಡಳಿತವನ್ನು ನೀಡಿದ್ದಾರೆ, ನಾನು ನಿಮ್ಮ ಕ್ಷೇತ್ರದವನು, ನಿಮ್ಮ ಮನೆ ಮಗನು, ನಿಮ್ಮ ಗ್ರಾಮದಲ್ಲಿ ಹುಟ್ಟಿ ಬೆಳೆದು ಈ ಮಟ್ಟಕ್ಕೆ ಬಂದಿದ್ದೇನೆ, ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ,

ಈ ಯಿಂದೆ ನನ್ನ 3 ವರ್ಷದ ಅವಧಿಯಲ್ಲಿ ಪಟ್ಟಣದ ಬಸ್ ನಿಲ್ದಾಣ, ಡಿಗ್ರಿ ಕಾಲೇಜ್,ಕುಡಿಯುವ ನೀರು, ಇದರ ಜೊತೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ನನ್ನ, ಕ್ಷೇತ್ರಕ್ಕೆ ಮಾಡಿದ್ದೇನೆ, ಹಾಗಾಗಿ ತಮ್ಮ ಅಮೂಲ್ಯವಾದ ಮತವನ್ನು ನನ್ನ ಕ್ರಮ ಸಂಖ್ಯೆ 2ರ ಕಮಲದ ಗುರುತಿಗೆ ನಿಮ್ಮ ಪ್ರೀತಿಯ ಮತವನ್ನು ಹಾಕಿ ನನ್ನನ್ನು ಪಾರ್ಲಿಮೆಂಟಿಗೆ ಕಳಿಸಿಕೊಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ.

ನರೇಂದ್ರ ಮೋದಿ ರವರು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ಯನ್ನು ನೀಡಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿಶೇಷವಾದ ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಆಗಾಗಿ ಈ ಚುನಾವಣೆ ಯಲ್ಲಿ ನನ್ನನ್ನು ಅತೀ ಹೆಚ್ಚು ಮತಗಳನ್ನ ನೀಡಿ ಗೆಲ್ಲಿಸಬೇಕೆಂದು ತಿಳಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಅನಿಲ್, ಕಾರ್ಯದರ್ಶಿ ಕೆಂಪರಾಜು,ರೈತ ಮುರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೋಮಾರಣಪುರ ಚಂದ್ರು,ಚಾಮುಲ್ ಅಧ್ಯಕ್ಷ ನಾಗೇಂದ್ರ, ಮಾಜಿ ಮಂಡಲ ಅಧ್ಯಕ್ಷ ಮಹೇಶ್, ಮಾಜಿ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ರವೀಶ್ ಲೋಕೇಶ್, ಮಾಂಬಳ್ಳಿ ರಾಮಣ್ಣ, ಯರಿಯೂರು ಚಂದ್ರಶೇಖರ್, ಬಿಜೆಪಿ ಕಾರ್ಯಕರ್ತರು,ಯುವಕರು, ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!