Ad imageAd image

ಬೈಲಹೊಂಗಲದಲ್ಲಿ ಚೆನ್ನಮ್ಮಾಜೀ ಅವರ 200 ನೇ ವಿಜಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಆಗ್ರಹ.

Bharath Vaibhav
ಬೈಲಹೊಂಗಲದಲ್ಲಿ ಚೆನ್ನಮ್ಮಾಜೀ ಅವರ 200 ನೇ ವಿಜಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಆಗ್ರಹ.
WhatsApp Group Join Now
Telegram Group Join Now

ಬೈಲಹೊಂಗಲ: ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲದ ಯುವ ಮೋರ್ಚಾ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮನವರ 200 ನೇ ವಿಜಯೋತ್ಸವವನ್ನು ಬೈಲಹೊಂಗಲ ನಗರದಲ್ಲಿಯೂ ಅದ್ದೂರಿಯಾಗಿ ಆಚರಿಸಲು ಮನವಿ ನೀಡಿ ಆಗ್ರಹಿಸಿದರು.
ಈಗಾಗಲೇ ಕಿತ್ತೂರು ಮತ್ತು ಕಾಕತಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ ಆದರೆ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ ಆಚರಿಸುವದರಿಂದ ವೀಶೇಷ ಮೆರಗು ಬರುತ್ತದೆ ಜೋತೆಗೆ ಐಕ್ಯ ಸ್ಥಳವು ರಾಷ್ಟ್ರೀಯ ಸ್ಮಾರಕ ವಾಗಬೇಕು ಎನ್ನುವ ಬೇಡಿಕೆಗೆ ಪುಷ್ಠಿ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಪ್ರಶಾಂತ್ ಅಮ್ಮಿನಭಾವಿ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚೀನ ಕಡಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳಾದ ನಾಗಪ್ಪ ಸಂಗೊಳ್ಳಿ, ಗೌಡಪ್ಪ ಹೊಸಮನಿ, ಸದಾಶಿವ ಪಾಟೀಲ, ಸಂಪ್ರೀತ ತಿಗಡಿ, ಬಸವರಾಜ ಪೂಜೇರ, ಬಸವರಾಜ ದೊಡಮನಿ, ಅನೇಕರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!