Ad imageAd image

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ

Bharath Vaibhav
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ
WhatsApp Group Join Now
Telegram Group Join Now

ರಾಮದುರ್ಗ:-ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ ಹ್ಯಾಟ್ರಿಕ್‌ ಜಯಭೇರಿ ಸಾದಿಸಿದ ಹಿನ್ನೆಲೆಯಲ್ಲಿ ಇಂದು ರಾಮದುರ್ಗ ನಗರದ ಹುತಾತ್ಮ ಚೌಕದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲವತಿಯಿಂದ ಸಿಹಿ ವಿತರಿಸಿ ಪಟಾಕಿ ಹಾರಿಸಿ  ಸಂಭ್ರಮಸಲಾಯಿತು.ಬಿಜೆಪಿ ಮಂಡಲ ಅಧ್ಯಕ್ಷರಾದ ಕೆವಿ ಪಾಟೀಲ್ ಅವರು ನೇತೃತ್ವದಲ್ಲಿ ಇಂದು ಹರಿಯಾಣದಲ್ಲಿ 48 ಸೀಟು ಬಂದಿರುವುದುದಿಂದ ಎಲ್ಲ ಬಿಜೆಪಿ ಕಾರ್ಯಕರ್ತ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ ವಿ ಪಾಟೀಲ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಈರಣ್ಣ
ಅಂಗಡಿ,ಜಿಲ್ಲಾ ಯುವ ಮೋರ್ಚಾ ಮಹಾಂತೇಶ ಚಿನ್ನಪಗೌಡರ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ಶಾಲಿನಿ ಇಳಿಗೇರ,ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಚಂದ್ರಶೇಖರಯ್ಯ ಹಿರೇಮಠ್, ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೌಕೀರ್ ಕತಿಬ್,ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಆನಂದ ಅತ್ತೋಗೋಳ, ಈರಣ್ಣಗೌಡ ಹೊಸಗೌಡರ್,ಬಸವರಾಜ್ ನೇಸರಗಿ, ರಾಧಿಕಾ ಧೂತ್, ಅನುಷಾ ಗರಡಿಮನಿ, ಗೀತಾ ಕಲ್ಲೂರ್, ಅಕ್ಷತಾ ನಂದರಗಿ ಪಕ್ಷದ ಪ್ರಮುಖರು, ಹಾಗೂ ಎಲ್ಲ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು

ವರದಿ:- ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!