Ad imageAd image

ಬಿಜೆಪಿಯವರು ರಕ್ತ ಪಿಪಾಸುಗಳು : ಪ್ರಿಯಾಂಕ್ ಖರ್ಗೆ 

Bharath Vaibhav
ಬಿಜೆಪಿಯವರು ರಕ್ತ ಪಿಪಾಸುಗಳು : ಪ್ರಿಯಾಂಕ್ ಖರ್ಗೆ 
PRIYANKA KHARGE
WhatsApp Group Join Now
Telegram Group Join Now

ಬೆಂಗಳೂರು : ಭಾರತೀಯ ಜನತಾ ಪಕ್ಷದವರು ರಕ್ತ ಪಿಪಾಸುಗಳು. ಬಿಜೆಪಿಯವರು ಅಮಾಯಕರ ಹೆಸರಲ್ಲಿ ರಾಜಕೀಯ ಲಾಭ ಪಡೆಯುವವರು. ಮಾಧ್ಯಮಗಳ ಮುಂದೆ ಹಾಗಾಗಿದೆ ಹೀಗಾಗಿದೆ ಎಂದು ಹೇಳಿಕೆ ಕೊಡುತ್ತಾರೆ.

ನಿಮ್ಮಿಂದ ತಪ್ಪಾದಾಗಲೂ ಹಾಗೆ ಮಾತನಾಡಬೇಕಲ್ವಾ? ಇಂದು ನವೆಂಬರ್ 8 ನೋಟು ಅಮಾನೀಕರಣ ವರ್ಷಾಚರಣೆ.ಬಿಜೆಪಿಯವರು ಇದರ ಸಂಭ್ರಮಾಚರಣೆ ಮಾಡಿದ್ದೀರಾ? ಇಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಪ್ಪು ಹಣ ವಾಪಸ್ ತರುವ ನೋಟು ಅಮಾನೀಕರಣ ಎಂದು ಹೇಳಿದ್ದರು.

ಕಪು ಹಣ ವಾಪಸ್ ಬಂತಾ? ಬ್ಯಾಂಕ್ ಎಟಿಎಂ ಮುಂದೆ ಸರತಿ ಸಾಲಿನಲ್ಲಿ ನಿಂತವರು ಎಷ್ಟು ಜನ ಹೇಳಿ? ನರೇಂದ್ರ ಮೋದಿ ಅವರಷ್ಟು ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ. ನರೇಂದ್ರ ಮೋದಿ ಬಿಜೆಪಿಯವರು ಸುಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ ಎಂದು ಕಿಡಿ ಕಾರಿದರು.

2022 ರಲ್ಲಿ ಹಾವೇರಿಯ ರೈತ ಆತ್ಮಹತ್ಯೆಗೆ ಶರಣಾಗಿದ್ದರು.ಆಗ ಬಿಜೆಪಿ ಅಧಿಕಾರದಲ್ಲಿ ಇತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಅಂದು ಸಿಎಂ ಆಗಿದ್ದ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ.

ಸಿಎಂ ತವರು ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಆದಾಗ ಬಿಜೆಪಿ ಏನು ಮಾಡುತ್ತಿತ್ತು? ಬಿಜೆಪಿಯವರು ಕುರ್ಚಿಗಾಗಿ ಮುಸ್ಲಿಮರನ್ನು ಅಷ್ಟೇ ಬಲಿ ಕೊಡುವುದಿಲ್ಲ ಬೇರೆ ಸಮುದಾಯದವರನ್ನು ಕೂಡ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಎಂದರು.

ರಾಜ್ಯದಲ್ಲಿ ನಾವು ವಕ್ಫ್ ಆಸ್ತಿ ಪತ್ತೆ ಹಚ್ಚಿ ರಕ್ಷಣೆ ಮಾಡುತ್ತೇವೆ. ಜಿಪಿಎಸ್ ಮಾದರಿಯಲ್ಲಿ ವಕ್ಫ್ ಆಸ್ತಿಯನ್ನು ಪತ್ತೆ ಹಚ್ಚುತ್ತೇವೆ ವಕ್ಫ್ ಆಸ್ತಿ ಒತ್ತುವರಿ ಮಾಡುವುದಾಗಿ ನಿಮ್ಮ ಸರ್ಕಾರ ಹೇಳಿತ್ತು. ಜಂಟಿ ಸದನ ಸಮಿತಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅದು ಜಂಟಿ ಸದನ ಸಮಿತಿ ಅಲ್ಲ.

ಬಿಜೆಪಿ ಸಮಿತಿ. ಅವರೊಬ್ಬರೇ ಹೇಗೆ ಬಂದರು?ಸಮಿತಿ ಸದಸ್ಯರು ಯಾಕೆ ಬರಲಿಲ್ಲ ಜಂಟಿ ಸಮಿತಿ ಸದನ ಸಮಿತಿಯ ರಾಜಕೀಯ ಪ್ರೇರಿತವಾಗಿದೆ. ಉಪಚುನಾವಣೆಯ ಸಂದರ್ಭದಲ್ಲಿ ಜೆಪಿಸಿ ಅಧ್ಯಕ್ಷರು ಬಂದಿದ್ದು ಹೇಗೆ? ಎಂದು ರಾಜ್ಯಕ್ಕೆ ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!