ಸಿಂದಗಿ:- ಜಾತಿ, ಕೋಮು, ಧರ್ಮ ಬದಿಗಿಟ್ಟು ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಇಂದು ಚುನಾವಣೆ ಎದುರಿಸುತ್ತಿರುವುದು ನಮ್ಮಗೆ ಸಂತಸವಿದೆ. ಆದರೆ ಬಿಜೆಪಿ ಕೇವಲ ಒಬ್ಬ ವ್ಯಕ್ತಿ ಹಾಗೂ ಧರ್ಮ ಇಟ್ಟುಕೊಂಡು ಚುನಾವಣೆಗೆ ಬಂದಿರುವುದು ಶೋಚನೀಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಹೇಳಿದರು
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಇದೆ ಮಂಗಳವಾರ ದಿನಾಂಕ 24 ಬೆಳಿಗ್ಗೆ 11ಗಂಟೆಗೆ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಸಿಂದಗಿಯ ಮಾಂಗಲ್ಯ ಭವನದಲ್ಲಿ ಚುನಾವಣೆ ಪ್ರಚಾರ ಸಭೆ ಜರುಗಲಿದೆ ಆದರಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ನಾಯಕರು ಅಭಿಮಾನಿಗಳು ಅಂದು ಆಗಮಿಸಿ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಶಕ್ತಿಯಾಗಿ ನಿಲ್ಲಬೇಕಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಲು ವಿನಂತಿಸಿದರು.
ನಂತರ ಕಾಂಗ್ರೆಸ್ ವಕ್ತಾರ ರಾಜಶೇಖರ ಕುಚಬಾಳ ಮಾತನಾಡಿ ಮೂವತ್ತು ವರ್ಷಗಳ ಕಾಲ ಒಂದೇ ಒಂದು ಪ್ರಶ್ನೆ ಕೆಳದೆ ಜಿಗಜಿಣಗಿಯವರು ತಮ್ಮ ಆಸ್ತಿ ದುಪ್ಪಟ್ಟು ಮಾಡಿಕೊಂಡರೆ ವಿನಃ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಘೋಷಿಸಿದ ಸ್ತ್ರೀ ನ್ಯಾಯ ರೂಪದಲ್ಲಿ ಒಂದು ವರುಷಕ್ಕೆ ಒಂದು ಲಕ್ಷ ಕುಟುಂಬದ ಮಹಿಳೆಗೆ ನೀಡುವ ಘೋಷಣೆ ಕಾಂಗ್ರೆಸ್ ಮಾಡಿರುವುದು ಭಾರತದ ಪ್ರಜೆಗಳಲ್ಲಿ ನೂತನ ಆಶಾ ಭಾವನೆ ಮೂಡಿಸಿದೆ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶಗೌಡ ಬಿರಾದಾರ, ನಿಂಗಣ್ಣ ಬುಳ್ಳಾ, ನೂರ ಅಹ್ಮದ್ ಅತ್ತಾರ, ಹಾಸೀಂ ಆಳಂದ, ಯಂಕಂನಗೌಡ ಪಾಟೀಲ ಉಪಸ್ಥಿತರಿದ್ದರು.
ವರದಿ:-ಅಬ್ದುಲ




