Ad imageAd image

ತಾಂಡಾಗಳ ಅಭಿವೃದ್ಧಿಗೆ ಬಿಜೆಪಿಯೇ ಕಾರಣ : ಬೊಮ್ಮಾಯಿ

Bharath Vaibhav
BOMMAI
WhatsApp Group Join Now
Telegram Group Join Now

ಹಾವೇರಿ: ಕಾಂಗ್ರೆಸ್ ನವರು ಲಂಬಾಣಿ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡಿದ್ದಾರೆ. ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಮೀಸಲಾತಿ ಕೊಡಿಸಲು ಬದ್ದನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ..

ಅವರು ಇಂದು ಬಂಜಾರ ಸಮುದಾಯದ ಕೃಷ್ಣಾಪುರ ಮಠದ ಆವರಣದಲ್ಲಿ ಲಂಬಾಣಿ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಟ್ಟಕಡೆಯ ಸಮಾಜದ ಧ್ವನಿ ಕೇಳಬೇಕು. ಅದು ಕೇಳಲು ಸಮಾಜ ಸಂಘಟನೆ ಆಗಬೇಕು. ಈ ಸಮಾಜ ದೇವರ ವರದಾನ ಇರುವ ಸಮಾಜ, ಸಂತ ಸೇವಾಲಾಲ್ ಅವರ ಅಶೀರ್ವಾದ ಇರುವ ಸಮಾಜ, ಅತ್ಯಂತ ಕಷ್ಟದಲ್ಲಿರುವ ಜನರು ನೀವು. ನೀವು ಬಹಳ ಕಷ್ಟಪಟ್ಟು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದೀರಿ, ಅವರಿಗೆ ಅವಕಾಶ ಕೊಟ್ಟರೆ ದೊಡ್ಡ ಸ್ಥಾನಗಳನ್ನು ಪಡೆಯುತ್ತಾರೆ. ಸರ್ಕಾರ ಕೈ ಹಿಡಿದರೆ ಈ ಸಮುದಾಯದ ಯುವಕರು ಉನ್ನತ ಸ್ಥಾನ ಪಡೆಯುತ್ತಾರೆ ಎಂದರು.

ದೇಶದ ಎಲ್ಲ ಭಾಗಗಳಲ್ಲಿ ಇರುವ ಕೆಲವೇ ಕೆಲವು ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಒಂದು. ಈ ಸಮುದಾಯ ಮುಂದೆ ಬರಲು ವಿದ್ಯೆ ಮತ್ತು ಉದ್ಯೋಗದಲ್ಲಿ ಅವಕಾಶ ದೊರೆಯಬೇಕು.

ಈ ಸಮುದಾಯ ಅಂಬೆಡ್ಕರ್ ಅವರನ್ಮು ನೆನಪಿಡಬೇಕು. ಅಂಬೇಡ್ಕರ್ ಅವರು ಎಸ್ಸಿ ಎಸ್ಟಿಗೆ ವಿಶೇಷ ಮೀಸಲಾತಿ ನೀಡಿ ಅವಕಾಶ ಕೊಟ್ಟರು. ಬಂಜಾರಾ ಸಮಾಜವನ್ನು ಎಸ್ಸಿಗೆ ಸೇರಿಸಿದ್ದು ದೇವರಾಜ ಅರಸರು. ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರು ದೇವರಾಜ ಅರಸರು ಮಾತ್ರ ಎಂದರು.

WhatsApp Group Join Now
Telegram Group Join Now
Share This Article
error: Content is protected !!