ಬೆಳಗಾವಿ : ಬೆಳಗಾವಿಯಲ್ಲಿ ನಕಲಿ ಗಾಂಧಿಗಳನ್ನು ಒಟ್ಟು ಸೇರಿಸಿ ಕಾಂಗ್ರೆಸ್ ಸಮಾವೇಶ ನಡೆಸಿದೆ ಎಂದು ಬಿಜೆಪಿ ವಾಗ್ಧಾಳಿ ನಡೆದಿದೆ.
ಟ್ವೀಟ್ ಮಾಡಿರುವ ಬಿಜೆಪಿ ಬೆಳಗಾವಿಯಲ್ಲಿ ನಕಲಿ ಗಾಂಧಿಗಳನ್ನು ಒಟ್ಟು ಸೇರಿಸಿ ಗಾಂಧೀಜಿ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿದೆ.
ಕಾಂಗ್ರೆಸ್ ಸರ್ಕಾರ ಈಗ 60 ಪರ್ಸೆಂಟ್ ಕಮಿಷನ್ ಮೋಡ್ನಲ್ಲಿ ಕಾರ್ಯಾಚರಿಸುತ್ತಿದ್ದು, ಅಕ್ರಮ ಹಣ ಸಂಗ್ರಹಿಸಿ ಸಮಾವೇಶ ನಡೆಸುತ್ತಿದೆ, ಚುನಾವಣೆಗಳನ್ನು ಎದುರಿಸುತ್ತಿದೆ.
ರಾಜ್ಯದಲ್ಲಿ ಅತ್ಯಾಚಾರ, ಅನಾಚಾರಗಳು ನಡೆಯುತ್ತಿದ್ದರೂ ನಕಲಿ ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿಅವರನ್ನು ನಾಡಿನ ಧೀಮಂತ ನಾರಿ ಶಕ್ತಿ ಕಿತ್ತೂರು ರಾಣಿ ಚೆನ್ನಮ್ಮಳಿಗೆ ಹೋಲಿಸುವ ಮೂಲಕ ಕಾಂಗ್ರೆಸ್ ಈ ನಾಡಿನ ಹಿರಿಮೆಯನ್ನು ಅವಮಾನಿಸುತ್ತಿದೆ. ಕಮಿಷನ್ ಮೂಲಕ ಪೀಕಿದ ದುಡ್ಡಲ್ಲಿ ಸಮಾವೇಶ ನಡೆಸಿ, ಅಲ್ಲಿ ಅಂಬೇಡ್ಕರ್, ಸಂವಿಧಾನ, ರಾಣಿ ಚೆನ್ನಮ್ಮಳ ಹೆಸರನ್ನು ಪ್ರಸ್ತಾಪಿಸುವುದೇ ದೊಡ್ಡ ಅವಮಾನ ಎಂದು ಬಿಜೆಪಿ ವಾಗ್ಧಾಳಿ ನಡೆದಿದೆ.




