Ad imageAd image
- Advertisement -  - Advertisement -  - Advertisement - 

ಶಿಕ್ಷಣ ಇಲಾಖೆಯ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ : ಬಿಜೆಪಿ ವಾಗ್ದಾಳಿ

Bharath Vaibhav
ಶಿಕ್ಷಣ ಇಲಾಖೆಯ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ : ಬಿಜೆಪಿ ವಾಗ್ದಾಳಿ
WhatsApp Group Join Now
Telegram Group Join Now

ಚಾಮರಾಜನಗರ : ಶಿಕ್ಷಣ ಇಲಾಖೆಯ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ ಹಾಕಲಾಗಿದ್ದು, ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.

ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿತರಿಸಲಾದ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ ಹಾಕಲಾಗಿದ್ದು, ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.ಪ್ರಶಸ್ತಿ ಪತ್ರದ ಎಡಭಾಗದಲ್ಲಿ ಹಾಗೂ ಬಲಭಾಗದಲ್ಲಿ ಕ್ರೈಸ್ತ ಧರ್ಮದ ಆರಾಧಕರ ಚಿತ್ರಗಳನ್ನು ಮುದ್ರಿಸಲಾಗಿದೆ.

ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ

ಶಾಲೆಗಳ ಮುಖ್ಯದ್ವಾರದಲ್ಲಿ “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ” ಎಂಬ ಸಾಲು ಬರೆಯುವುದು ಕೋಮುವಾದ ಶಾಲಾ ಕಾಲೇಜುಗಳ ಆವರಣದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಕೋಮುವಾದ ಆದರೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗು ಮೇರಿ ಫೋಟೋ ಹಾಕುವುದು ಮಾತ್ರ ಜಾತ್ಯತೀತ! ಇದು ಕಾಂಗ್ರೆಸ್ ಸರ್ಕಾರದ ನಿಜವಾದ ಜಾತ್ಯತೀತತೆ. ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತತೆ ಎಂಬುದು ಹಿಂದೂ ಧರ್ಮವನ್ನ ವಿರೋಧಿಸಲು, ಹಿಂದೂಗಳನ್ನ ದ್ವೇಷಿಸಲು ಇರುವ ಒಂದು ಮುಖವಾಡವೇ ಹೊರತು, ಮತ್ತೇನು ಅಲ್ಲ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ಶೀಘ್ರದಲ್ಲೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!