ಹುಬ್ಬಳ್ಳಿ: ಹಿಂದುಳಿದ ವರ್ಗ, ಕ್ಷತ್ರಿಯ ವರ್ಗ ಸಣ್ಣ ಸಣ್ಣ ಜಾತಿಯ ಕಾರ್ಯಕರ್ತರನ್ನು ರಾಜ್ಯದ ಬಿಜೆಪಿ ನಾಯಕರು ಕಣೆಗಣಿಸುತ್ತಿದ್ದು ಇದು ಬಿಜೆಪಿಗೆ ಶೋಭೆಯಲ್ಲ ಎಂದು ಕೇಸರಿ ಸಮಿತಿ ಕರ್ನಾಟಕ ಹಾಗೂ ಹಿಂದುತ್ವನಿಷ್ಠ ಅವಕಾಶ ವಂಚಿತ ನೊಂದ ಬಿಜೆಪಿ ಕಾರ್ಯಕರ್ತರ ಪರಿವಾರದ ಉಮೇಶ ಆಲಮೇಲಕರ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವನಿಷ್ಠ ಮೂಲ ಕಾರ್ಯಕರ್ತರನ್ನು ಮೂಲೆಗೆ ಹಾಕಿ ಬೇರೆ ಪಕ್ಷದಿಂದ ಬಂದ ಜಾತಿವಾದಿಗಳು, ಬಂಡವಾಳಶಾಹಿ, ವ್ಯಾಪಾರ ಬುದ್ದಿಯ ಸಿದ್ದಾಂತ ರಹಿತರನ್ನು ಪಕ್ಷದ ಆಯಕಟ್ಟಿನ ಸ್ಥಳಗಳಲ್ಲಿ ನೇಮಿಸಿ ಮೂಲ ಸಿದ್ದಾಂತವಾದಿಗಳನ್ನು ಅಪಮಾನಿಸಲಾಗುತ್ತದೆ. ಕುಟುಂಬ ರಾಜಕೀಯ, ಸೃಜನ ಪಕ್ಷಪಾತ ಮಿತಿ ಮೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು 2024 ಲೋಕಸಭಾ ಚುನಾವಣೆಯಲ್ಲಿ ಸೇರಿದಂತೆ ಹಲವು ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಕ್ಷತ್ರಿಯ ವರ್ಗಗಳನ್ನು ಕಡೆಗಣಿಸಿದ ಪರಿಣಾಮ ಏನಾಯಿತು ಎಂಬುದನ್ನು ರಾಷ್ಟ್ರೀಯ ನಾಯಕರು ಅವಲೋಕಿಸಿ ರಾಜ್ಯ ನಾಯಕರಿಗೆ ಬುದ್ದಿ ಹೇಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೇ ಮುಂದಿನ ಪರಿಣಾಮಕ್ಕೆ ನೇರವಾಗಿ ರಾಜ್ಯದ ನಾಯಕರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.
ಸದ್ಯ ಅನ್ಯಾಯಕ್ಕೆ ಒಳಗಾದ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯಕರ್ತರ ಸಭೆಯನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಅಂತಿಮ ಸಭೆಯನ್ನು ನಡೆಸಿ ಕೇಂದ್ರದ ನಾಯಕರಿಗೆ ನಮ್ಮ ಬೇಡಿಕೆಗಳನ್ನು ತಿಳಿಸಲಾಗುವುದು. ಅದಾಗ್ಯೂ ನಮಗೆ ನ್ಯಾಯಸಿಗದೇ ಹೋದಲ್ಲಿ ರಾಜ್ಯದಲ್ಲಿನ ಬಿಜೆಪಿ ಕಾರ್ಯಕರ್ತರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಆರ್.ಗುರುಬಸಣ್ಣವರ, ರಾಜೇಶ ಜೈನ್, ಉಮೇಶ ಗವಳಿ, ಮಹೇಶ ದೊಡ್ಡಮನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಸುಧೀರ್ ಕುಲಕರ್ಣಿ




