Ad imageAd image

32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್ ಎ ಮೋದಿ’ ಕಿಟ್ ವಿತರಣೆಗೆ ಬಿಜೆಪಿ ಸಿದ್ಧತೆ

Bharath Vaibhav
32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್ ಎ ಮೋದಿ’ ಕಿಟ್ ವಿತರಣೆಗೆ ಬಿಜೆಪಿ ಸಿದ್ಧತೆ
WhatsApp Group Join Now
Telegram Group Join Now

ನವದೆಹಲಿ: ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಲ್ಪಸಂಖ್ಯಾತ ಮೋರ್ಚಾ ತನ್ನ ‘ಸೌಗತ್-ಎ-ಮೋದಿ ಅಭಿಯಾನವನ್ನು ಆರಂಭಿಸಲು ಸಜ್ಜಾಗಿದ್ದು, ರಂಜಾನ್‌ಗೆ ಮುಂಚಿತವಾಗಿ ದೇಶದಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ವಿಶೇಷ ಕಿಟ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.
ನಡ್ತಾ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್‌ನಿಂದ ಪ್ರಾರಂಭವಾದ ಈ ಉಪಕ್ರಮವು ಬಡ ಮುಸ್ಲಿಂ ಕುಟುಂಬಗಳು ಯಾವುದೇ ಕಷ್ಟವಿಲ್ಲದೆ ಹಬ್ಬವನ್ನು ಆಚರಿಸುವುದನ್ನು ಖಚಿತಪಡಿಸುತ್ತದೆ ಎಂದು ವರದಿ ತಿಳಿಸಿದೆ.

ಅಭಿಯಾನದ ಭಾಗವಾಗಿ, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶದಾದ್ಯಂತ 32,000 ಮಸೀದಿಗಳೊಂದಿಗೆ ಸಂಪರ್ಕ ಸಾಧಿಸಿ ಅಗತ್ಯವಿರುವ ಮುಸ್ಲಿಮರಿಗೆ ಕಿಟ್‌ಗಳನ್ನು ತಲುಪಿಸಲಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ಧಿಕಿ ಅವರು ಅಭಿಯಾನದ ವಿಶಾಲ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಪವಿತ್ರ ರಂಜಾನ್ ಮಾಸ ಮತ್ತು ಮುಂಬರುವ ಈದ್, ಗುಡ್ ಫ್ರೆಡೇ ಈಸ್ಟರ್, ನೌರುಜ್ ಮತ್ತು ಭಾರತೀಯ ಹೊಸ ವರ್ಷದಂತಹ ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಮೋರ್ಚಾ ‘ಸೌಗತ್-ಎ- ಮೋದಿ’ಅಭಿಯಾನದ ಮೂಲಕ ಅಗತ್ಯವಿರುವವರನ್ನು ತಲುಪುತ್ತದೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article
error: Content is protected !!