ರಾಯಚೂರು:ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಆಕಳ ಕೆಚ್ಚೆಲ ಕೊಯ್ದು ಘಟನೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು ರಾಯಚೂರು ನಗರದಲ್ಲಿಯೂ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು ಇಂದು ಮುಂಜಾನೆ ಬಸವೇಶ್ವರ ವೃತ್ತದಿಂದ ಸಚಿವರ ಕಚೇರಿ ಅವರಿಗೆ ಗೋವುಗಳನ್ನು ಮುನ್ನಡೆಸಿಕೊಂಡು ವಿಶೇಷ ಮೆರವಣಿಗೆ ನಡೆಸಿ ಪ್ರತಿಭಟನೆಯನ್ನು ಉಜ್ವಲ ಗೊಳಿಸಿದರು.
ಗೋ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ನಿರ್ಲಕ್ಷೇತ್ರಯನ್ನು ತೀವ್ರವಾಗಿ ಖಂಡಿಸಿದರು ಪ್ರತಿಭಟನೆಯಲ್ಲಿ ಬಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗೋಹತ್ಯೆಗೆ ತಡೆಯೊಡ್ಡಿ ಎಂಬ ಘೋಷಣೆಗಳನ್ನು ಕೂಗಿದರು ಪ್ರತಿಭಟನೆಯು
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ನಡೆದಿತ್ತು ಈ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುಖಂಡರುಗಳು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ನಗರದ ಶಾಸಕರು ಬಿಜೆಪಿ ಜಿಲ್ಲಾಧ್ಯಕ್ಷ ಡಾಕ್ಟರ್ ಶಿವರಾಜ ಪಾಟೀಲ್. ಎನ್ ಶಂಕ್ರಪ್ಪ. ರವೀಂದ್ರಜಿಲ್ದಾರ್. ಆಂಜನೇಯ ಕಡಗೊಲ್. ಬಿಜೆಪಿಯ ಮಂಡಲಾ ಅಧ್ಯಕ್ಷರು ನಗರ ಘಟಕ ಅಧ್ಯಕ್ಷರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ