ಸಿಂಧನೂರು : ಅಗಸ್ಟ್ 26 ಧರ್ಮ ಸ್ಥಳ ಹಾಗೂ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಮಸಿ ಬಳಿಯುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ತಹಸಿಲ್ದಾರ್ ಕಛೇರಿ ಮುಂದೆ ಬಿಜೆಪಿ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಯಿತು ಎಂದು ಸಿದ್ರಾಮೇಶ್ ನಗರ ಮಂಡಲ ಅಧ್ಯಕ್ಷರು ತಿಳಿಸಿದರು ನಂತರ ಅವರು ಮಾತನಾಡಿ ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ ಹಿಂದೂಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿದೆ ಹಿಂದುಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಸುಳ್ಳು ಅಪಪ್ರಚಾರವನ್ನು ಮಾಡುತ್ತಿದ್ದಾರೆ ರಾಜ್ಯ ಸರ್ಕಾರ ಧಾರ್ಮಿಕ ಕ್ಷೇತ್ರದ ಪವಿತ್ರತೆಯನ್ನು ಹಾಗೂ ವೀರೇಂದ್ರ ಹೆಗ್ಗಡಿಯವರ ಘನತೆ ಗೌರವ ಎತ್ತಿ ಹಿಡಿಯಬೇಕು ಇಲ್ಲದಿದ್ದರೆ ಬಿಜೆಪಿ ಪಕ್ಷದಿಂದ ಅನಿವಾರ್ಯವಾಗಿ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ. ಕರಿಯಪ್ಪ ಬಿಜೆಪಿ ಮುಖಂಡ ಸಿಂಧನೂರು. ಸಿದ್ದಾಮೇಶ ಮನ್ನಾಪುರ ನಗರ ಮಂಡಲ ಅಧ್ಯಕ್ಷ. ದೊಡ್ಡ ಬಸವರಾಜ. ಎಂ.ಮಲ್ಲಿಕಾರ್ಜುನ. ವೆಂಕಟೇಶ್ ಇನ್ನೂ ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




