Ad imageAd image

ವಕ್ಫ್ ವಿರುದ್ಧ ಬಿಜೆಪಿ ಪ್ರತಿಭಟನೆ 

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ರೈತರ ಮತ್ತು ಇತರರ ಜಮೀನುಗಳನ್ನು ತನ್ನ ಆಸ್ತಿ ಎಂದು ಗುರುತಿಸುತ್ತಿರುವ ವಕ್ಫ್ ಬೋರ್ಡ್ ವಿಚಾರವಾಗಿ ಸರ್ಕಾರದ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪಿಸಿ ಮೋಹನ್‌, ವಿಪಕ್ಷ ನಾಯಕ ಆರ್‌ ಅಶೋಕ್‌, ಶಾಸಕ ಮುನಿರತ್ನ, ರಾಮಮೂರ್ತಿ, ಮಾಜಿ ಸಚಿವ ಸಿಟಿ ರವಿ ಇನ್ನಿತರ ಮುಖಂಡರು ಭಾಗಿಯಾಗಿದ್ದಾರೆ.

ಈ ವೇಳೆ ಕಾಂಗ್ರೆಸ್‌ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಲಕ್ಷವಿಲ್ಲ. ಸಿಂದಿಗಿ ವಿರುಕ್ತ ಮಠದ ಭೂಮಿ ನುಂಗಿದ ವಕ್ಫ್‌ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ಶೋಭಾ ಕರಂದ್ಲಾಜೆ ಮಾತನಾಡಿ, ಕಾನೂನಿನಲ್ಲಿ ವಕ್ಫ್‌ ಅದಾಲತ್ತಿಗೆ ಅವಕಾಶವಿಲ್ಲ. ಆದರೂ ಒತ್ತಡ ಹೇರಿ ವಕ್ಫ್‌ ಅದಾಲತ್‌ ಮಾಡುತ್ತಿದ್ದಾರೆ. ಸುಮಾರು 16 ಸಾವಿರ ರೈತರ ಭೂಮಿಗೆ ನೋಟಿಸ್‌ ನೀಡಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

ಸಿಟಿ ರವಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರಕ್ಕೆ ಕೊಟ್ಟಿದ್ದು, ಭಸ್ಮಾಸುರನಿಗೆ ಅವಕಾಶ ಕೊಟ್ಟ ಹಾಗೇ ಆಗಿದೆ. 1500ರ ವರ್ಷದ ಹಿಂದಿನ ಸೋಮೇಶ್ವರ ದೇವಾಲಯವು ವಕ್ಫ್‌ ಬೋರ್ಡ್‌ಗೆ ಸೇರಿದ್ದು ಎಂದು ಜಮೀರ್‌ ಅಹ್ಮದ್‌ ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಮುಸ್ಲಿಂ ಧರ್ಮವೇ ಇರಲಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬೇಕಿದ್ದರೆ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಗ್ರೆಸ್ ಭವನ ನಿರ್ಮಿಸಬಹುದು, ಅವರ ಬಳಿ ಹಣದ ಕೊರತೆ ಇದೆಯೇ?, ಕಾಂಗ್ರೆಸ್ ನಾಯಕರ ಮನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಇದೆ. ಆದರೆ ಕಾಂಗ್ರೆಸ್ ಸರ್ಕಾರ 14 ಲಕ್ಷ ಪಡಿತರ ಚೀಟಿಗಳನ್ನು ಕಿತ್ತುಕೊಂಡಿದೆ ಎಂದು ಕಿಡಿಕಾರಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!