Ad imageAd image

ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ : ಈರಣ್ಣ ಕಾರಬಾರಿ

Bharath Vaibhav
ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ : ಈರಣ್ಣ ಕಾರಬಾರಿ
WhatsApp Group Join Now
Telegram Group Join Now

ಭಾಲ್ಕಿ : ಕರ್ನಾಟಕ ರಾಜ್ಯ ಸರಕಾರ ಅನ್ನದಾತ ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸಿರುವುದು ಮತ್ತು ಸಕಾಲಕ್ಕೆ ರೈತರಿಗೆ ಬೇಕಾಗುವಷ್ಟು ರಸಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣವಾಗಿವಿಫಲಗೊಂಡಿದೇ ಇದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯ ಸರ್ಕಾರದ ಈ ರೈತ ವಿರೋಧಿ ನೀತಿಯನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ, ರೈತರೊಂದಿಗೆ ಸೇರಿ
ಇದೆ ತಿಂಗಳ ದಿನಾಂಕ 30 ಬುಧವಾರ ದಂದು ಮದ್ಯಾಹ್ನ 02: 00 ಗಂಟೆಗೆ ಪಟ್ಟಣದ ಹೃದಯಭಾಗದಲ್ಲಿರುವ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ರವರ ವೃತದಲ್ಲಿ ರಸ್ತೆ ತಡೆ ನಡಿಸಿ ರಾಜ್ಯ ಸರ್ಕಾರದ ಈ ಕೃತ್ಯಕ್ಕೆ ಪ್ರತಿಭಟನೆ ಮಾಡಲಾಗುತ್ತಿದೆ
ಆದಕಾರಣ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸರಿಯಾದ ಸಮಯಕ್ಕೆ ಬಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತಿಭಟನೆ ಯಶಸ್ವಿ ಮಾಡಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷರಾದ
ಈರಣ್ಣ ಕಾರಭಾರಿ ವಿನಂತಿಸಿದ್ದಾರೆ.

ವರದಿ: ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!