ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ, ಅಧಿಕಾರದ ಹಂಚಿಕೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಾದ ವಿವಾದದ ಹೇಳಿಕೆ.. ಸಿಎಂ ಬಣ.. ಡಿಸಿಎಂ ಬಣ ಕಿತ್ತಾಟ ಅಂತಾ ಟೀಕಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ವ್ಯಂಗ್ಯವಾಗಿ ಕಾಲೆಳೆದಿದೆ.
ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಕುರ್ಚಿಗೆ ಇನ್ನಿಲ್ಲದ ಪೈಪೋಟಿ ಶುರುವಾಗಿದ್ದು, ಬಿ.ವೈ.ವಿಜಯೇಂದ್ರಗೆ ಠಕ್ಕರ್ ಕೊಡಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಸಜ್ಜಾಗಿದೆ.
ವಿಜಯೇಂದ್ರ ಅಧ್ಯಕ್ಷ ಪಟ್ಟ ಅಲಂಕರಿಸಿದ ಕ್ಷಣದಿಂದಲೇ ಕಮಲ ಪಾಳಯದಲ್ಲಿ ಕೊಂಕು ಮಾತನಾಡುವ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದಿದೆ.
ಈ ಅತೃಪ್ತರೆಲ್ಲರೂ ಒಟ್ಟಾಗಿ ಸೇರಿಕೊಂಡು ಯಡಿಯೂರಪ್ಪನವರ ಮಗನನ್ನು ಎಳಸು, ಬಚ್ಚಾ, ನಾಲಾಯಕ್ ಎಂದೆಲ್ಲಾ ಹೀಯಾಳಿಸಿ ಬಣ ಕಟ್ಟಿಕೊಂಡು ಅಧ್ಯಕ್ಷ ಕುರ್ಚಿಯನ್ನು ಅಲುಗಾಡಿಸುತ್ತಿದ್ದಾರೆ.
ಇದರಲ್ಲಿ ಯತ್ನಾಳ್ ಬಣ ಪ್ರಮುಖ ಪಾತ್ರ ವಹಿಸುತ್ತಿದೆ. ಒಡೆದ ಮನೆಯ ಯಜಮಾನಿಕೆಗಾಗಿನ ಕಚ್ಚಾಟದಲ್ಲಿ ಕಮಲದ ದಳಗಳು ಉದುರಿ ನೂರು ಭಾಗಗಳಾಗಿದ್ದು, ಅಧ್ಯಕ್ಷ ಚುನಾವಣೆಯಷ್ಟರಲ್ಲಿ ಮತ್ತಷ್ಟು ಮನೋರಂಜನೆ ಖಚಿತ ಎಂದು ಕೈಪಡೆ ಲೇವಡಿ ಮಾಡಿದೆ.